ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಾಗೃಹ ವೈದ್ಯಕೀಯ ಸಿಬ್ಬಂದಿ ಭರ್ತಿಗೆ ನಿರ್ದೇಶನ

Last Updated 15 ಏಪ್ರಿಲ್ 2021, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಕಾರಾಗೃಹಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ವೈದ್ಯಕೀಯ ಅಧಿಕಾರಿಗಳು, ಮನೋವೈದ್ಯರು, ಫಾರ್ಮಾಸಿಸ್ಟ್ ಸೇರಿ 114 ಮಂಜೂರಾತಿ ಹುದ್ದೆಗಳಿದ್ದು, ಅದರಲ್ಲಿ 86 ಹುದ್ದೆಗಳು ಖಾಲಿ ಇವೆ ಎಂಬುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿತು.

ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಕಾರಾಗೃಹಗಳಿಗೆ ವರ್ಗಾಯಿಸಲು ಸಾಧ್ಯವೇ ಎಂಬುದನ್ನು ಪರಿಗಣಿಸುವಂತೆ ನಿರ್ದೇಶನ ನೀಡಿತು. ‘ಕೈದಿಗಳ ನೈರ್ಮಲ್ಯ, ಕಾರಾಗೃಹಗಳ ದಟ್ಟಣೆ, ಕೈದಿಗಳಿಗೆ ಒದಗಿಸುವ ಆಹಾರ, ಕುಟುಂಬ ಸದಸ್ಯರು ಭೇಟಿಯಾಗಲು ಇರುವ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದೂ ಪೀಠ ತಿಳಿಸಿತು.

‘ಜೈಲಿನಲ್ಲಿ ಸದ್ಯ ಇರುವ ಸೌಲಭ್ಯಗಳ ವರದಿಯನ್ನು ಮಾದರಿ ಜೈಲಿನ ಕೈಪಿಡಿಯಲ್ಲಿನ ಮಾರ್ಗಸೂಚಿಗಳಿಗೆ ಹೋಲಿಸಿದರೆ ಹಲವು ನ್ಯೂನತೆಗಳಿರುವುದು ತಿಳಿಯುತ್ತದೆ. 6 ಕೈದಿಗಳಿಗೆ ಒಂದು ಶೌಚಾಲಯ ಮತ್ತು 10 ಕೈದಿಗಳಿಗೆ ಒಂದು ಸ್ನಾನಗೃಹ ಇರಬೇಕು. ಆದರೆ, ಬೆಂಗಳೂರು, ಮೈಸೂರು ಮತ್ತು ಕೋಲಾರ ಕಾರಾಗೃಹಗಳಲ್ಲಿ 15 ಕೈದಿಗಳಿಗೆ ಒಂದು ಸ್ನಾನಗೃಹ ಇದೆ ಎಂದು ವರದಿ ಹೇಳುತ್ತಿದೆ’ ಎಂದು ಪೀಠ ಹೇಳಿತು.

‘ಹೆಚ್ಚುವರಿಯಾಗಿ ಕಾರಾಗೃಹಗಳ ನಿರ್ಮಾಣದ ಪ್ರಸ್ತಾಪ ಸರ್ಕಾರದ ಮುಂದೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಸದ್ಯ ಇರುವ ಜೈಲುಗಳಲ್ಲಿ ಸುಪ್ರೀಂ ಕೋರ್ಟ್‌ ಆದೇಶಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದರ ಕುರಿತು ಅನುಸರಣಾ ವರದಿ ಸಲ್ಲಿಸಬೇಕಾಗುತ್ತದೆ’ ಎಂದು ತಿಳಿಸಿತು. ವಿಚಾರಣೆಯನ್ನು ಮೇ 29ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT