ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru Metro Pink Line | ಡಬಲ್ ಡೆಕರ್‌ ಪೂರ್ಣ: ಶೀಘ್ರ ಸಂಚಾರಕ್ಕೆ ಮುಕ್ತ

Published 14 ಜೂನ್ 2024, 23:56 IST
Last Updated 14 ಜೂನ್ 2024, 23:56 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ನಗರದ ಮೊದಲ ‘ಡಬಲ್‌ ಡೆಕರ್‌’ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಪ್ರಾಯೋಗಿಕ ಪರೀಕ್ಷೆಗಳು ಮುಗಿದ ಬಳಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಆರ್‌.ವಿ. ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ 3.3 ಕಿ.ಮೀ. ದೂರ ವಾಹನ ಹಾಗೂ ಮೆಟ್ರೊ ರೈಲು ಸಂಚರಿಸುವ ರೀತಿಯಲ್ಲಿ ಈ ಮೇಲ್ಸೇತುವೆ ನಿರ್ಮಿಸಲಾಗಿದೆ. ಒಂದೇ ಪಿಲ್ಲರ್‌ಗೆ ರೋಡ್ ಕಂ ರೇಲ್‌(ಡಬಲ್ ಡೆಕರ್‌) ಸೇತುವೆ ನಿರ್ಮಾಣಗೊಂಡಿದೆ.

ಎರಡೂ ಬದಿಗಳಲ್ಲಿ ಎರಡು ರಸ್ತೆ ನಿರ್ಮಿಸಲಾಗಿದ್ದು, ಇಲ್ಲಿ ಬಸ್‌, ಕಾರು ಸಹಿತ ಎಲ್ಲ ರೀತಿಯ ವಾಹನಗಳು ಸಂಚರಿಸಲಿವೆ. ಎರಡನೇ ಅಂತಸ್ತಿನ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸಲಿದೆ. ನೆಲ ಅಂತಸ್ತಿನಲ್ಲಿರುವ ತ್ರಿಪಥ ರಸ್ತೆಯಲ್ಲಿ ಸಂಚಾರ ಎಂದಿನಂತೆ ಮುಂದುವರಿಯಲಿದೆ. ಡಬಲ್ ಡೆಕರ್‌ ಮಾರ್ಗದ ಮೇಲೆ ವಾಹನಗಳು ಒಮ್ಮೆ ಹತ್ತಿದರೆ ಮಧ್ಯದಲ್ಲಿ ಇಳಿಯಲು ಅವಕಾಶ ಇಲ್ಲ. ವಾಹನ ದಟ್ಟಣೆ ಕಡಿಮೆ ಮಾಡಲು ಇದು ನೆರವಾಗಲಿದೆ. ಸಿಗ್ನಲ್‌ರಹಿತ ಸಂಚಾರಕ್ಕೆ ಅನುಕೂಲ ಆಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್‌ ಒಳಗೆ ಗುಲಾಬಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭಗೊಳ್ಳಲಿದೆ. ಚಾಲಕರಹಿತ ಎಂಜಿನ್‌ ಹೊಂದಿರುವ ಮೆಟ್ರೊ ಇದೇ ಮಾರ್ಗದಲ್ಲಿ ಸಂಚರಿಸುವುದು ಒಂದು ವಿಶೇಷವಾದರೆ, ರೋಡ್ ಕಂ ರೇಲ್‌ ಸಿಸ್ಟಂ ಈ ಮಾರ್ಗದ ಇನ್ನೊಂದು ವಿಶೇಷ. ಜಯದೇವ ಜಂಕ್ಷನ್‌ನಲ್ಲಿ ಸುರಂಗದಲ್ಲಿ ಗುಲಾಬಿ ಮೆಟ್ರೊ (ಕಾಳೇನ ಅಗ್ರಹಾರ–ನಾಗವಾರ ಮಾರ್ಗ), ಅದರ ಮೇಲೆ ರಸ್ತೆ, ರಸ್ತೆಯ ಮೇಲೆ ಹಳದಿ ಮೆಟ್ರೊ ರೈಲು ಸಂಚರಿಸಲಿದೆ. ಈ ರೀತಿ ಮೆಟ್ರೊ–ರಸ್ತೆ–ಮೆಟ್ರೊ ಒಂದರ ಮೇಲೆ ಒಂದು ಇರುವ ವ್ಯವಸ್ಥೆ ಬೇರೆ ಎಲ್ಲಿಯೂ ಇಲ್ಲ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ ಕಾಮಗಾರಿ 2021ರಲ್ಲಿ ಆರಂಭವಾಗಿತ್ತು. ರೋಡ್ ಕಂ ರೇಲ್‌ ಸಿಸ್ಟಂ ಸೇರಿದಂತೆ ಈ ಕಾಮಗಾರಿ 2021ಕ್ಕೆ ಪೂರ್ಣಗೊಳ್ಳಬೇಕಿತ್ತು. ವಿಶೇಷ ವಿನ್ಯಾಸ, ಕೋವಿಡ್ ಇನ್ನಿತರ ಕಾರಣಗಳಿಂದ ಮಧ್ಯೆ ಎರಡು ವರ್ಷ ಕಾಮಗಾರಿ ನಿಧಾನವಾಗಿತ್ತು. ಇದೀಗ ಅಂತಿಮ ಹಂತಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT