ಬೆಂಗಳೂರು: ಉತ್ತರ ಉಪ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಾಲ್ಕು ಪ್ರತ್ಯೇಕ ಪ್ರಕರಣದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಫರ್ಹಾನ್ ಹುಸೈನ್(29), ಉಪೇಶ್ ಬಹದ್ದೂರ್(20), ಸನ್ಮಾನ್ ಖುರೇಷಿ (25) , ಮಹಮದ್ ಶೋಯೆಬ್(28), ಚಂದನ್(24) ಮತ್ತು ಉಮರ್ ಸಾಹುದ್(26) ಬಂಧಿತರು.

ಆರೋಪಿಗಳಿಂದ ₹61 ಲಕ್ಷ ಮೌಲ್ಯದ 6.2 ಕೆ.ಜಿ ಗಾಂಜಾ, 278 ಗ್ರಾಂ ಎಂಡಿಎಂಎ, 75 ಗ್ರಾಂ ಚರಸ್, ₹ 69 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪೈಕಿ ಮಹಮದ್ ಶೋಯೆಬ್, ಚಂದನ್ ಹಾಗೂ ಉಮರ್ ಸಾಹುದ್ ಒಟ್ಟಿಗೆ ಎಂಜಿನಿಯರಿಂಗ್ ಓದಿದ್ದರು. ಎಂಜಿನಿಯರಿಂಗ್ ಓದುವ ಸಂದರ್ಭದಲ್ಲೇ ಗಾಂಜಾ ತೆಗೆದುಕೊಳ್ಳುತ್ತಿದ್ದರು. ಓದು ಮುಗಿದ ಬಳಿಕ ಹೆಚ್ಚಿನ ಹಣ ಸಂಪಾದನೆಗಾಗಿ ಡ್ರಗ್ಸ್ ಪೆಡ್ಲಿಂಗ್ ದಂಧೆಗೆ ಇಳಿದಿದ್ದರು. ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್ಎಂಟಿ ಕ್ವಾಟ್ರಸ್ ಬಳಿ ಗಾಂಜಾ ಮಾರಾಟಕ್ಕೆ ಬಂದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಆರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.