ಬೆಂಗಳೂರು: ಕೋವಿಡ್‌ನಿಂದಾಗಿ ವಿವಿಧ ವರ್ಗದವರು ಎದುರಿಸಿದ ಸಂಕಷ್ಟಗಳು ಸೇರಿದಂತೆ ರೋಗ ತಂದ ಬದಲಾವಣೆಗಳ ಬಗ್ಗೆ ಶಿವಮೊಗ್ಗದ ಹವ್ಯಾಸಿ ರಂಗ ತಂಡಗಳ ಕಲಾವಿದರ ಸಂಘವು ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆ ಆಯೋಜಿಸಿದೆ.

ಕೋವಿಡ್ ಸಂದರ್ಭದಲ್ಲಿನ ಸಾವು–ನೋವು, ಸಂಘರ್ಷ, ಸಾಮರಸ್ಯ, ಪ್ರೀತಿ–ಪ್ರೇಮ, ಕೌಟುಂಬಿಕ ದೌರ್ಜನ್ಯ, ರಾಜಕೀಯ ಬೆಳವಣಿಗೆ, ಭ್ರಷ್ಟಾಚಾರ, ಕಾರ್ಮಿಕರ ವಲಸೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಸ್ವತಂತ್ರ ನಾಟಕವನ್ನು ರಚಿಸಬೇಕು. ರಂಗ ಪ್ರಯೋಗದ ಅವಧಿ 1 ಗಂಟೆ 15 ನಿಮಿಷಗಳಿಂದ 1 ಗಂಟೆ 30 ನಿಮಿಷಗಳ ಕಾಲಮಿತಿ ಹೊಂದುವಂತೆ ಇರಬೇಕು. 6 ಸಾವಿರದಿಂದ 7,500 ಪದಗಳ ಮಿತಿಯ ಬರವಣಿಗೆಯಾಗಿರಬೇಕು. ಪ್ರಥಮ ಬಹುಮಾನ ₹ 15 ಸಾವಿರ, ದ್ವಿತೀಯ ಬಹುಮಾನ ₹ 12 ಸಾವಿರ, ತೃತೀಯ ಬಹುಮಾನ ₹ 10 ಸಾವಿರ ಹಾಗೂ ಎರಡು ಸಮಾಧಾನಕರ ಬಹುಮಾನ ತಲಾ ₹ 5 ಸಾವಿರ ಇರಲಿದೆ ಎಂದು ಸಂಘವು ತಿಳಿಸಿದೆ.

ನಾಟಕದ ಪ್ರತಿಯನ್ನು ಇ ಮೇಲ್ ವಿಳಾಸ kalavidarusmg@gmail.com ಅಥವಾ ಕೊಟ್ರಪ್ಪ ಜಿ. ಹಿರೇಮಾಗಡಿ, ಕೊಹಿಮಾ 2ನೇ ಮುಖ್ಯರಸ್ತೆ, 6ನೇ ತಿರವು, ಅಶೋಕ ನಗರ, ಶಿವಮೊಗ್ಗ–577205 ಈ ವಿಳಾಸಕ್ಕೆ ಅ.30ರೊಳಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ. ಸಂಪರ್ಕಕ್ಕೆ.: 9449291919, 9448138183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.