ಕೆ.ಆರ್.ಪುರ: ಯುವಕರು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಬೆಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ ಹರಿಬಾಬು ಹೇಳಿದರು.

ಕೆ.ಆರ್.ಪುರ ಸಮೀಪದ ಎನ್.ಆರ್.ಐ ಬಡಾವಣೆಯಲ್ಲಿ ಎಸ್.ಕೆ.ಎಫ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ರಾಮಮೂರ್ತಿನಗರ ಮ್ಯಾರಥಾನ್ನಲ್ಲಿ ಮಾತನಾಡಿದರು.

ಅತಿಹೆಚ್ಚು ಯುವಕರನ್ನು ಹೊಂದಿರುವ ಭಾರತದಲ್ಲಿ ಮಾದಕ ವ್ಯಸನದಂತಹ ಚಟಗಳಿಗೆ ಹದಿಹರೆಯದ ಯುವಕರು ಬಲಿಯಾಗುತ್ತಿರುವ ಖೇದಕರ ಸಂಗತಿ. ಯುವ ಸಮೂಹವೊಂದಿದ್ದರೆ ದೇಶ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಅರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದರು.

ನಟಿ ಸಪ್ತಮಿಗೌಡ ಮಾತನಾಡಿ, ಸಮಾಜದ ಕಾಳಜಿಯಿಂದ ಯುವಕರನ್ನು ಮಾದಕ ವ್ಯಸನದಿಂದ ಕಾಪಾಡುವ ಉದ್ದೇಶದಿಂದ ಎಸ್.ಕೆ.ಎಫ್ ಫೌಂಡೇಶನ್ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.

ಮ್ಯಾರಥಾನ್ ನಲ್ಲಿ ರಾಮಮೂರ್ತಿನಗರದ ಸುತ್ತಮುತ್ತಲಿನ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಅಪಾರ್ಟ್ಮೆಂಟ್ ನಿವಾಸಿಗಳು, ಪೋಲಿಸ್ ಅಧಿಕಾರಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಎಸ್.ಕೆ.ಎಫ್ ಫೌಂಡೇಶನ್ ನ ಅಧ್ಯಕ್ಷೆ ಶಾಂತಕೃಷ್ಣಮೂರ್ತಿ, ಸಂಸ್ಥಾಪಕ ಸದಸ್ಯ ಕಲ್ಕೆರೆ ಕೃಷ್ಣಮೂರ್ತಿ, ಮ್ಯಾರಥಾನ್ ಪಟು ಭಾಗ್ಯಶ್ರೀ ಸವಾಂತ್, ಇನ್ಸ್ಪೆಕ್ಟರ್ ಸತೀಶ್, ಅಂಬರೀಶ್, ಪೃಥ್ವಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.