ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಮಾಫಿಯಾ; ಆರೋಪಿಗಳ ತಲೆ ಕೂದಲು ಮಾದರಿ ವಾಪಸು

Last Updated 2 ಅಕ್ಟೋಬರ್ 2020, 8:09 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಧಿಸಲಾಗಿರುವ ಆರೋಪಿಗಳಿಂದ ಸಂಗ್ರಹಿಸಿದ ತಲೆ ಕೂದಲು ಮಾದರಿಯನ್ನು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಾಪಸ್ಸು ಕಳುಹಿಸಿದ್ದಾರೆ.

ಆರೋಪಿಗಳು ಮಾದಕ ವ್ಯಸನಿಗಳಾಗಿರುವ ಅನುಮಾನವಿತ್ತು. ಅದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯದ ಅನುಮತಿ ಪಡೆದು ಮೂತ್ರ, ರಕ್ತ, ತಲೆ ಕೂದಲು ಪರೀಕ್ಷೆಗೆ ಮಾದರಿ ಸಂಗ್ರಹಿಸಲಾಗಿತ್ತು.
ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಇತರೆ ಆರೋಪಿಗಳ ಮಾದರಿಯನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

'ಕೂದಲು ಮಾದರಿ ಸಂಗ್ರಹಿಸಿದ ವಿಧಾನ ವೈಜ್ಞಾನಿಕವಾಗಿಲ್ಲ' ಎಂದು ಹೇಳಿ ವಾಪಸ್ಸು ಕಳುಹಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಸಿಬಿಯ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ, 'ಸಣ್ಣ ತಾಂತ್ರಿಕ ಕಾರಣದಿಂದ ಈ ರೀತಿಯಾಗಿದೆ. ಈಗ ಎಲ್ಲವೂ ಸರಿಯಾಗಿದೆ' ಎಂದಿದ್ದಾರೆ.

'ರಕ್ತ ಹಾಗೂ ಮೂತ್ರದ ಮಾದರಿಯು ಈಗಾಗಲೇ ಪ್ರಯೋಗಾಲಯದಲ್ಲಿ ಇದೆ. ಮೊದಲ ಬಾರಿಗೆ ತಲೆ ಕೂದಲು ಪರೀಕ್ಷೆ ಮಾಡಿಸಲಾಗಿದೆ. ಅದರ ಜೊತೆಗೇ ಹಲವು ತಾಂತ್ರಿಕ ಪುರಾವೆಗಳು, ಜಪ್ತಿ ಮಾಡಲಾದ ವಸ್ತುಗಳು ಇವೆ' ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT