ಡ್ರಗ್ ಮಾಫಿಯಾ: ವಿರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಪತ್ತೆ

ಬೆಂಗಳೂರು: ಡ್ರಗ್ಸ್ ಪ್ರಕರಣದ ಆರೋಪಿ ವಿರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಪತ್ತೆಯಾಗಿದೆ.
ನ್ಯಾಯಾಲಯದ ಶೋಧನಾ ವಾರಂಟ್ ಪಡೆದು ಸಿಸಿಬಿ ತಂಡಗಳು, ವಿರೇನ್ ಖನ್ನಾನ ಶಾಂತಿನಗರ ಹಾಗೂ ದೆಹಲಿ ನಿವಾಸದಲ್ಲಿ ತಪಾಸಣೆ ನಡೆಸುತ್ತಿವೆ.
‘ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆರೋಪಿ ಖನ್ನಾ, ಪೊಲೀಸ್ ಸಮವಸ್ತ್ರ ಧರಿಸುತ್ತಿದ್ದ. ಅದೇ ಸಮವಸ್ತ್ರ ಮನೆಯಲ್ಲಿ ಸಿಕ್ಕಿದೆ. ಮತ್ತಷ್ಟು ವಸ್ತಗಳೂ ಪತ್ತೆಯಾಗಿವೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.
ಇದನ್ನೂ ಓದಿ... ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ: ವಶಕ್ಕೆ
ಸಿಸಿಬಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ವಿರೇನ್ ಖನ್ನಾ ಕುಟುಂಬದವರ ವಾಗ್ವಾದ
ಬೆಂಗಳೂರು: ಡ್ರಗ್ಸ್ ಜಾಲದ ಆರೋಪಿ ವಿರೇನ್ ಖನ್ನಾ ಮನೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರ ಮೇಲೆ, ಖನ್ನಾ ಕುಟುಂಬದವರು ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಗೊತ್ತಾಗಿದೆ.
ನಗರದ ಶಾಂತಿನಗರ ಹಾಗೂ ದೆಹಲಿಯಲ್ಲಿರುವ ಮನೆಯಲ್ಲಿ ಸಿಸಿಬಿಯ ಎರಡು ಪ್ರತ್ಯೇಕ ತಂಡಗಳು ಏಕಕಾಲದಲ್ಲಿ ದಾಳಿ ಮಾಡಿವೆ.
ನ್ಯಾಯಾಲಯದ ಶೋಧನಾ ವಾರಂಟ್ ಪಡೆದುಕೊಂಡು ಪೊಲೀಸರು, ಖನ್ನಾ ಮನೆಗೆ ಹೋಗಿದ್ದರು. ಅವರನ್ನು ತಡೆದಿದ್ದ ತಾಯಿ ಹಾಗೂ ಸಹೋದರ, ಮನೆಗೆ ಏಕೆ ಬಂದಿದ್ದಿರಾ? ಎಂದು ಪ್ರಶ್ನಿಸಿದರು.
ಅರ್ಧ ಗಂಟೆಯವರೆಗೆ ಪೊಲೀಸರನ್ನು ಹೊರಗೆ ನಿಲ್ಲಿಸಿ, ತಮ್ಮ ವಕೀಲರನ್ನು ಸ್ಥಳಕ್ಕೆ ಕರೆಸಿದಿದ್ದರು.
ವಕೀಲರು ಶೋಧನಾ ವಾರಂಟ್ ನೋಡಿದ ನಂತರವೇ ಕುಟುಂಬದವರು ಮನೆಯಲ್ಲಿ ಶೋಧನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಶೋಧ ಮುಂದುವರಿದಿದೆ.
‘ಡ್ರಗ್ಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪೊಲೀಸರು ಆರೋಪಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ. ತಂಡದ ಸದಸ್ಯರು ತಮ್ಮ ಕರ್ತವ್ಯ ನಿರ್ವಹಿಸಿ ಕಚೇರಿಗೆ ಬರಲಿದ್ದಾರೆ. ಯಾರಾದರೂ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಗೊತ್ತಾದರೆ, ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಇದನ್ನೂ ಓದಿ...‘ಈರುಳ್ಳಿ’ಯ ಹೆಸರಲ್ಲಿ ಡ್ರಗ್ಸ್ ವ್ಯವಹಾರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.