ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1.5 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ: ಪೆಡ್ಲರ್‌ ಸೆರೆ

Last Updated 24 ಡಿಸೆಂಬರ್ 2021, 20:16 IST
ಅಕ್ಷರ ಗಾತ್ರ

ಬೆಂಗಳೂರು: ಆಫ್ರಿಕಾ ಮೂಲದ ಅಂತರರಾಷ್ಟ್ರೀಯ ಡ್ರಗ್‌ ಪೆಡ್ಲರ್‌ ಬೆಂಜಮಿನ್‌ ಸಂಡೆ ಯಾನೆ ಅಂಥೋಣಿ ಎಂಬಾತನನ್ನು ಬಂಧಿಸಿರುವ ಎನ್‌ಸಿಬಿ ಅಧಿಕಾರಿಗಳು ಆತನಿಂದ ₹1.5 ಕೋಟಿ ಮೌಲ್ಯದ 968 ಗ್ರಾಂ ಅಂಪೆಟಮೈನ್‌, 2.889 ಕೆ.ಜಿ.ಎಫಿಡ್ರೈನ್‌ ಜಪ್ತಿ ಮಾಡಿದ್ದಾರೆ.

‘ಬೆಂಗಳೂರು, ಚೆನ್ನೈ ವಲಯದ ಎನ್‌ಸಿಬಿ ಅಧಿಕಾರಿಗಳು ಗುಪ್ತಚರ ಮಾಹಿತಿ ಆಧರಿಸಿ ಬೆಂಜಮಿನ್‌ನನ್ನು ಬಂಧಿಸಿದ್ದಾರೆ. ಮುಂಬೈನಿಂದ ತರಿಸಿದ್ದ ಮಾದಕ ವಸ್ತುಗಳನ್ನು ಆತ ಕೊರಿಯರ್‌ ಮೂಲಕ ವಿದೇಶಗಳಿಗೆ ರಫ್ತು ಮಾಡಲು ಮುಂದಾಗಿದ್ದ. ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ಮರದ ಮೂರು ಸಣ್ಣ ಪೆಟ್ಟಿಗೆಗಳಲ್ಲಿ ತಲಾ 165 ಗ್ರಾಂ, ಎರಡು ತಲೆದಿಂಬುಗಳಲ್ಲಿ ತಲಾ 237 ಗ್ರಾಂ, 236 ಗ್ರಾಂಅಂಪೆಟಮೈನ್‌ ಅಡಗಿಸಿಟ್ಟಿದ್ದ. ಎರಡು ಡಬ್ಬಿಯಲ್ಲಿ ತಲಾ 1.811 ಕೆ.ಜಿ, 1.078 ಕೆ.ಜಿ. ಎಫಿಡ್ರೈನ್‌ ಹುದುಗಿಸಿಟ್ಟಿದ್ದ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಆರೋಪಿಯು ಮಾದಕ ವಸ್ತುಗಳ ಆಮದು, ರಫ್ತು ದಂಧೆಯಲ್ಲಿ ತೊಡಗಿದ್ದ. 2018ರ ಸೆಪ್ಟೆಂಬರ್‌, 2021ರ ಸೆಪ್ಟೆಂಬರ್‌, ನವೆಂಬರ್‌ನಲ್ಲಿ ಚೆನ್ನೈನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅಲ್ಲಿನ ಅಧಿಕಾರಿಗಳಿಗೆ ಬೇಕಾಗಿದ್ದ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT