ಬೆಂಗಳೂರು: ಮಾದಕ ವಸ್ತು ಎಂಡಿಎಂಎ ಸಾಗಣೆ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕನೊಬ್ಬನನ್ನು ಮಾದಕ ವಸ್ತು ಕಳ್ಳಸಾಗಣೆ ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

‘ಮುಂಬೈನಿಂದ ನಗರದ ಕೊರಿಯರ್ ಏಜೆನ್ಸಿಯೊಂದಕ್ಕೆ ಎಂಡಿಎಂಎ ಪಾರ್ಸಲ್ ಬರುತ್ತಿರುವುದಾಗಿ ಖಚಿತ ಮಾಹಿತಿ ಬಂತು. ಆ ಏಜೆನ್ಸಿ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಒಂದು ಪಾರ್ಸಲ್‌ನಲ್ಲಿ ನೋಟ್ ಪುಸ್ತಕವಿತ್ತು. ಸಣ್ಣ ಸಣ್ಣ ಪ್ಯಾಕೇಟ್‌ಗಳಲ್ಲಿ ಎಂಡಿಎಂಎ ತುಂಬಿ, ಅವುಗಳನ್ನು ಆ ಪುಸ್ತಕದ ಹಾಳೆಗೆ ಅಂಟಿಸಲಾಗಿತ್ತು’ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

‘ಪಾರ್ಸಲ್ ಮೇಲೆ ಪ್ರಾಧ್ಯಾಪಕನ ಮನೆ ವಿಳಾಸವಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ‘ಯಾರೋ ಮುಂಬೈನಿಂದ ಪಾರ್ಸಲ್‌ನಲ್ಲಿ ಕಳುಹಿಸುತ್ತಿದ್ದರು. ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ನಗರದಲ್ಲಿ ಎಂಡಿಎಂಎ ಮಾರಾಟ ಮಾಡಿ, ಹಣವನ್ನು ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದೆ. ಈ ಕೆಲಸಕ್ಕೆ ನನಗೆ ಕಮಿಷನ್ ಸಿಗುತ್ತಿತ್ತು’ ಎಂದು ಆತ ಹೇಳಿಕೆ ಕೊಟ್ಟಿದ್ದಾನೆ. ಆತನಿಂದ ₹ 1 ಲಕ್ಷ ಮೌಲ್ಯದ 15 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ.’

‘ನಗರದಲ್ಲೇ ಎಂ.ಟೆಕ್ ಪದವಿ ಪಡೆದಿದ್ದ ಆರೋಪಿ, ನಂತರ ಉಪನ್ಯಾಸಕನಾಗಿ ಸೇರಿಕೊಂಡಿದ್ದ. ಕಾಲೇಜು ದಿನಗಳಲ್ಲಿ ಮಾದಕ ವ್ಯಸನಿಯಾಗಿದ್ದ ಆತ, ಕ್ರಮೇಣ ಪೆಡ್ಲರ್ (ಪೂರೈಕೆದಾರ) ಆಗಿ ಪರಿವರ್ತನೆಗೊಂಡಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.