ಬೆಂಗಳೂರು: ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಉತ್ತರ ಹಾಗೂ ಪೂರ್ವ ವಿಭಾಗದ ಪೊಲೀಸರು, ವಿದೇಶಿ ಪ್ರಜೆ ಸೇರಿ 9 ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹ 16 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಸುಡಾನ್ ದೇಶದ ಅಹಮದ್ ಓಮರ್ ಅಹಮದ್ ಸಾಯಿದ್ (27), ಭೂಪಸಂದ್ರದ ಶಬ್ಬೀರ್ ಖಾನ್ (34), ಕೊತ್ತನೂರಿನ ತಾಬ್ಶೀರ್ (24), ಲಝೀಮ್ ನಾಸೀರ್ (23), ಕೆ.ಜಿ.ಹಳ್ಳಿಯ ಸೈಯದ್ ಶಕೀರ್ (24), ಆರ್.ಟಿ.ನಗರದ ಮೊಹಮ್ಮದ್ ಶಹೀಂ (28), ಆಂಧ್ರಪ್ರದೇಶದ ಸುರೇಂದ್ರ ಅಲಿಯಾಸ್ ಸೂರ್ಯ (21), ಭೀಮಣ್ಣ (28) ಹಾಗೂ ನನ್ನಾರಾವ್ (24) ಬಂಧಿತರು. ಈ ಆರೋಪಿಗಳ ವಿರುದ್ಧ ಹೆಣ್ಣೂರು, ಸಂಜಯನಗರ ಹಾಗೂ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಸಿಎ ಓದುತ್ತಿದ್ದ ಸುಡಾನ್ ಪ್ರಜೆ: ‘ನಗರದ ಕಾಲೇಜೊಂದರಲ್ಲಿ ಎಂಸಿಎ ವ್ಯಾಸಂಗ ಮಾಡುತ್ತಿದ್ದ ಓಮರ್ ಅಹಮದ್, ಕಲ್ಯಾಣನಗರದ ಅಪಾರ್ಟ್ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್ನಲ್ಲಿ ನೆಲೆಸಿದ್ದ. ಒತ್ತಡಕ್ಕೆ ಒಳಗಾಗಿ ಮಾದಕ ವಸ್ತು ಸೇವಿಸುತ್ತಿದ್ದ ಬಗ್ಗೆ ಆತನೇ ಹೇಳಿಕೆ ನೀಡಿದ್ದಾನೆ. ಮಾದಕ ವ್ಯಸನಿಯಾದ ಆತ, ಆಫ್ರಿಕಾ ಯುವಕರಿಂದ ಡ್ರಗ್ಸ್ ಖರೀದಿಸಿ ಉಪ ಪೆಡ್ಲರ್ ಆಗಿ ಮಾರಾಟ ಮಾಡಲಾರಂಭಿಸಿದ್ದ’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್.ಡಿ. ಶರಣಪ್ಪ ತಿಳಿಸಿದರು.

‘ನಗರಕ್ಕೆ ಬಂದಾಗ ಬಾಡಿಗೆ ಮನೆಯಲ್ಲಿದ್ದ ಆತ, ಡ್ರಗ್ಸ್ ಮಾರಾಟ ಮಾಡಿ ಹಣ ಗಳಿಸಿದ್ದ. ನಂತರ ಫ್ಲ್ಯಾಟ್ಗೆ ವಾಸ್ತವ್ಯ ಬದಲಿಸಿದ್ದ. ಕಾಲೇಜಿನ ಸಹಪಾಠಿಗಳನ್ನೂ ಡ್ರಗ್ಸ್ ಮಾರಾಟಕ್ಕೆ ಬಳಸಿಕೊಳ್ಳುತ್ತಿದ್ದ. ಕೆಲ ಗ್ರಾಹಕರು ಆರೋಪಿಯ ಫ್ಲ್ಯಾಟ್ಗೆ ಬಂದು ಡ್ರಗ್ಸ್ ಖರೀದಿಸುತ್ತಿದ್ದರು. ಆತನ ಬಳಿ ₹ 5 ಲಕ್ಷ ಮೌಲ್ಯದ 50 ಗ್ರಾಂ ಜುರಾಸ್ಸಿಸ್ ಮಾತ್ರೆ, 10 ಗ್ರಾಂ ಎಂಡಿಎಂಎ ಸಿಕ್ಕಿದೆ’ ಎಂದೂ ಹೇಳಿದರು.

ಆಟೊ ಚಾಲಕ ಬಂಧನ: ‘ಆರೋಪಿ ಶಬ್ಬೀರ್ ಖಾನ್, ಆಟೊ ಚಾಲಕ. ಲಾಕ್ಡೌನ್ನಿಂದಾಗಿ ಆಟೊ ಬಾಡಿಗೆ ಓಡಿಸಲು ಆಗಿರಲಿಲ್ಲ. ಅವಾಗಲೇ ವಿಶಾಖಪಟ್ಟಣದ ಭೀಮಣ್ಣ ಮತ್ತು ನನ್ನಾರಾವ್ನನ್ನು ಸಂಪರ್ಕಿಸಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಗರಕ್ಕೆ ಬಂದು ಮಾರಾಟ ಮಾಡಲಾರಂಭಿಸಿದ್ದ. ಇದೀಗ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಬಿ.ಎಸ್ಸಿ ವಿದ್ಯಾರ್ಥಿ ಸೆರೆ: ‘ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿರುವ ಆರೋಪಿ ಸುರೇಂದ್ರ, ಅನಂತಪುರದಲ್ಲಿ ಬಿ.ಎಸ್ಸಿ ಓದುತ್ತಿದ್ದ. ಆಂಧ್ರಪ್ರದೇಶದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.

‘ಸಂಜನಾಗೆ ಸುಲ್ತಾನ್ ಶ್ವಾನ ಕೊಟ್ಟಿದ್ದು ನಾನೇ’
ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜೊತೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಆರೋಪದಡಿ ಶ್ವಾನ ತಜ್ಞ ಸತೀಶ್ ಕ್ಯಾಡಬೋಮ್ಸ್ ಅವರನ್ನು ಸಿಸಿಬಿ ಪೊಲೀಸರು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

‘ಇಂಡಿಯನ್ ಡಾಗ್ ಬ್ರೀಡರ್ಸ್ ಅಸೋಸಿಯೇಷನ್’ ಅಧ್ಯಕ್ಷರೂ ಆಗಿರುವ ಸತೀಶ್, ನಟಿಯರ ಜೊತೆ ಪಾರ್ಟಿಗಳಲ್ಲಿ ಫೋಟೊ ತೆಗೆಸಿಕೊಂಡಿದ್ದರು. ಅವರ ಮನೆಗೆ ಆಗಾಗ ನಟಿಯರು ಹೋಗಿಬರುತ್ತಿದ್ದರೆಂಬ ಮಾಹಿತಿ ಸಿಸಿಬಿಗೆ ಸಿಕ್ಕಿತು. ಇದೇ ಕಾರಣಕ್ಕೆ ಸತೀಶ್ ಅವರಿಗೆ ಸಿಸಿಬಿ ನೋಟಿಸ್ ನೀಡಿತ್ತು.

ಮಂಗಳವಾರ ಬೆಳಿಗ್ಗೆ 11ಕ್ಕೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾದ ಸತೀಶ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದರು. ಲಿಖಿತ ಹೇಳಿಕೆ ಪಡೆದು ವಾಪಸು ಕಳುಹಿಸಿದರು.

ವಿಚಾರಣೆ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸತೀಶ್, ‘ಪಾರ್ಟಿಯಲ್ಲಿ ಸಂಜನಾ ಹಾಗೂ ರಾಗಿಣಿ ಜೊತೆ ಫೋಟೊ ತೆಗೆಸಿಕೊಂಡಿದ್ದೆ. ಅದನ್ನು ನೋಡಿ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಿ ಪ್ರಶ್ನೆಗೆ ಉತ್ತರಿಸಿದ್ದೇನೆ’ ಎಂದರು.

‘ಹಲವು ನಟ–ನಟಿಯರ ಜೊತೆ ಕೆಲ ಪಾರ್ಟಿಗಳಲ್ಲಿ ನಾನೂ ಭಾಗವಹಿಸಿದ್ದೆ. ಆದರೆ, ಸಿಗರೇಟ್ ಹಾಗೂ ಡ್ರಗ್ಸ್ ಯಾವುದನ್ನೂ ನಾನು ತೆಗೆದುಕೊಂಡಿಲ್ಲ. ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದೂ ಹೇಳಿದರು.

‘ನಟಿ ಸಂಜನಾ ಮನೆಗೂ ಆಗಾಗ ಹೋಗಿ ಬಂದಿದ್ದೇನೆ. ಅವರ ಮನೆಯಲ್ಲಿರುವ ‘ಸುಲ್ತಾನ್’ ಶ್ವಾನವನ್ನು ನಾನೇ ಕೊಟ್ಟಿದ್ದು. ಅವರ ಮನೆಯಲ್ಲಿ ಸಣ್ಣಪುಟ್ಟ ಪಾರ್ಟಿ ಮಾತ್ರ ಮಾಡುತ್ತಿದ್ದೆವು’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.