ಶುಕ್ರವಾರ, ಜುಲೈ 30, 2021
27 °C

ಮಹಿಳೆ ಸೂಟ್‌ಕೇಸ್‌ನಲ್ಲಿ 8 ಕೆ.ಜಿ ಡ್ರಗ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಮಹಿಳಾ ಪ್ರಯಾಣಿಕರೊಬ್ಬರ ಸೂಟ್‌ಕೇಸ್‌ನಲ್ಲಿ 8 ಕೆ.ಜಿ ಹೆರಾಯಿನ್ ಪತ್ತೆಯಾಗಿದ್ದು, ಮಹಿಳೆಯನ್ನು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

‘ಬೆಂಗಳೂರಿನಲ್ಲಿ ನೆಲೆಸಿದ್ದರು ಎನ್ನಲಾದ ಮಹಿಳೆ, ದುಬೈನಿಂದ ಎಮಿರೆಟ್ಸ್ ವಿಮಾನದಲ್ಲಿ ನಿಲ್ದಾಣಕ್ಕೆ ಬಂದಿದ್ದರು. ನಿರ್ಗಮನ ದ್ವಾರದಲ್ಲಿ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಸಮೇತ ಸಿಕ್ಕಿಬಿದ್ದರು’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

’ಮಹಿಳೆ ಬಳಿ ಒಂದೇ ಸೂಟ್‌ಕೇಸ್ ಇತ್ತು. ತೆರೆದು ನೋಡಿದಾಗ, ಬಟ್ಟೆಗಳು ಹಾಗೂ ದಿನಬಳಕೆಯ ಸೌಂದರ್ಯ ವರ್ಧಕಗಳು ಇದ್ದವು. ಈ ಬಗ್ಗೆ ವಾದಿಸಿದ್ದ ಮಹಿಳೆ, ‘ಬಟ್ಟೆಗಳಷ್ಟೇ ಇರುವುದು’ ಎಂದಿದ್ದರು.’

‘ಮಹಿಳೆ ನಡೆಯಲ್ಲಿ ಅನುಮಾನಗೊಂಡ ಅಧಿಕಾರಿಗಳು ಸೂಟ್‌ಕೇಸ್‌ನಲ್ಲಿದ್ದ ವಸ್ತುಗಳನ್ನೆಲ್ಲ ತೆರೆದು ಪರಿಶೀಲಿಸಿದರು. ಸೂಟ್‌ಕೇಸ್‌ ಕೆಳಭಾಗದಲ್ಲಿ ಹೆರಾಯಿನ್ ಸಿಕ್ಕಿತು’ ಎಂದೂ ಮೂಲಗಳು ತಿಳಿಸಿವೆ.

‘ಬೆಂಗಳೂರಿನಲ್ಲಿ ಮಾರಾಟ ಮಾಡಲು ಆರೋಪಿ, ಹೆರಾಯಿನ್ ತಂದಿರುವುದಾಗಿ ಗೊತ್ತಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು