ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕೈ-ಕಾಲು ಕತ್ತರಿಸಿ ವೃದ್ಧೆ ಕೊಲೆ: ಆರೋಪಿ ವಶಕ್ಕೆ

Published 26 ಫೆಬ್ರುವರಿ 2024, 5:38 IST
Last Updated 26 ಫೆಬ್ರುವರಿ 2024, 5:38 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ‌ ವೃದ್ಧೆ ಸುಶೀಲಮ್ಮ (78) ಕೊಲೆ‌ ಪ್ರಕರಣದ ತನಿಖೆ‌ ಚುರುಕುಗೊಳಿಸಿರುವ ಪೊಲೀಸರು, ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ನಿಸರ್ಗ ಲೇಔಟ್‌ನ ಸುಶೀಲಮ್ಮ ಅವರನ್ನು ಕೈ- ಕಾಲು ಕತ್ತರಿಸಿ ಹತ್ಯೆ ಮಾಡಲಾಗಿದೆ. ಮೃತದೇಹವನ್ನು ಡ್ರಮ್‌ನಲ್ಲಿ ಇರಿಸಿ ಆರೋಪಿ ಪರಾರಿಯಾಗಿದ್ದ. ಭಾನುವಾರ ಮೃತದೇಹ ಪತ್ತೆಯಾಗಿತ್ತು.

ಸ್ಥಳಕ್ಕೆ ಬಂದ ಶ್ವಾನ ದಳದ ಸಿಬ್ಬಂದಿ ಪರಿಶೀಲನೆ‌ ನಡೆಸಿದ್ದರು. ಘಟನಾ ಸ್ಥಳದಲ್ಲಿ ಸುತ್ತಾಡಿದ್ದ ಶ್ವಾನ, ಸಮೀಪದಲ್ಲಿದ್ದ ಆರೋಪಿ ಮನೆಗೆ ಹೋಗಿ ನಿಂತಿತ್ತು. ಮನೆಯಲ್ಲಿದ್ದ ಆರೋಪಿ ಹೊರಗೆ ಬರುತ್ತಿದ್ದಂತೆ ಆತನ ಬಳಿ ಹೋಗಿತ್ತು. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆಸ್ತಿ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT