ಹಾಲು ಒಕ್ಕೂಟಗಳ ಪ್ರಸ್ತಾವದ ಮೇರೆಗೆ ರಾಜ್ಯ ಸರ್ಕಾರ ಹಾಲಿನ ದರ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್ಸಿ) ಆದೇಶದ ಮೇರೆಗೆ ವಿದ್ಯುತ್ ದರ ಪರಿಷ್ಕೃತಗೊಳಿಸಲಾಗಿದ್ದು, ಹೊಸ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.

ಹಾಲು ದುಬಾರಿ

ಕರ್ನಾಟಕ ಹಾಲು ಮಹಾ ಮಂಡಳದ (ಕೆಎಂಎಫ್) ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯಾಗಿದ್ದು, ಹೊಸ ದರ ಮಂಗಳವಾರದಿಂದ ಜಾರಿಗೆ ಬರಲಿದೆ. ನಂದಿನಿಯ ಎಲ್ಲಾ ಬ್ರ್ಯಾಂಡ್ನ ಹಾಲಿನ ಪ್ರತಿ ಲೀಟರ್ ಬೆಲೆಯಲ್ಲಿ ₹4ರಷ್ಟು ಹೆಚ್ಚಾಗಲಿದೆ. ಮೊಸರಿನ ಬೆಲೆಯೂ ₹4 ಹೆಚ್ಚಾಗಲಿದೆ. ಈ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವವರ ತಿಂಗಳ ವೆಚ್ಚವೂ ಹೆಚ್ಚಾಗಲಿದೆ.
.ನಂದಿನಿ ಹಾಲಿನ ದರ ಲೀಟರ್ಗೆ ₹4 ಏರಿಕೆ: ಏಪ್ರಿಲ್ 1 ರಿಂದ ಜಾರಿ.
ವಿದ್ಯುತ್ ತುಟ್ಟಿ

ಕೆಇಆರ್ಸಿ ಆದೇಶದ ಅನ್ವಯ ಪರಿಷ್ಕೃತಗೊಂಡಿರುವ ವಿದ್ಯುತ್ ದರ ಕೂಡ ಮಂಗಳವಾರದಿಂದ ಜಾರಿಗೆ ಬರಲಿದೆ. ಕೆಪಿಟಿಸಿಎಲ್ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ಶುಲ್ಕದ ಹೊರೆಯಾಗಿ 36 ಪೈಸೆಯನ್ನು ಎಲ್ಲ ಸ್ವರೂಪದ ಗ್ರಾಹಕರಿಗೆ ಹೊರಿಸಲಾಗಿದೆ. ಇದರ ಜೊತೆಗೆ, ಗೃಹ ಬಳಕೆ ಗ್ರಾಹಕರಿಗೆ ಮಂಜೂರಾದ ವಿದ್ಯುತ್ನ (ಕಿ.ವಾ) ಆಧಾರದಲ್ಲಿ ₹25 ರಿಂದ ₹100ರವರೆಗೂ ಹೆಚ್ಚುವರಿ ಹೊರೆ ಬೀಳಲಿದೆ. ಈ ತಿಂಗಳಿನಿಂದ ವಿದ್ಯುತ್ ಶುಲ್ಕದ ವೆಚ್ಚವೂ ಹೆಚ್ಚಾಗಲಿದೆ. ಸದ್ಯ ಗೃಹಬಳಕೆ (ಎಲ್ಟಿ–1) ವಿದ್ಯುತ್ ಸಂಪರ್ಕದಲ್ಲಿ ಪ್ರತಿ ಕೆ.ವಿಗೆ ₹120 ನಿಗದಿತ ಶುಲ್ಕ ವಿಧಿಸಲಾಗುತ್ತಿತ್ತು. ಇದನ್ನು ₹145ಕ್ಕೆ ಹೆಚ್ಚಿಸಲಾಗಿದೆ.
.ಹಾಲು ‘ಬಿಸಿ’: ವಿದ್ಯುತ್ ಶಾಕ್ | ಏ. 1ರಿಂದ ಹಾಲು-ವಿದ್ಯುತ್ ದರ ಏರಿಕೆ.
ಕಸ ನಿರ್ವಹಣೆ ವೆಚ್ಚ

ಬೆಂಗಳೂರಿನ ನಿವಾಸಿಗಳು ಇದೇ ಏಪ್ರಿಲ್ 1ರಿಂದ ಕಸ ನಿರ್ವಹಣೆಗೆ ವೆಚ್ಚ ಭರಿಸಬೇಕಾಗುತ್ತದೆ. ಕಟ್ಟಡಗಳ ವಿಸ್ತೀರ್ಣವನ್ನು ಆಧರಿಸಿ ₹10 ರಿಂದ ₹400ರವರೆಗೂ ಕಸ ನಿರ್ವಹಣೆ ವೆಚ್ಚವನ್ನು ಬಿಬಿಎಂಪಿಗೆ ಪಾವತಿಸಬೇಕಾಗುತ್ತದೆ. ಬೆಂಗಳೂರಿನ ಪ್ರತಿ ಮನೆ, ಅಂಗಡಿ, ಕಚೇರಿಗಳಿಗೂ ಇದು ಅನ್ವಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.