ಏ. 1ರಿಂದ ಅನ್ವಯವಾಗುವಂತೆ ಹಾಲು ಹಾಗೂ ವಿದ್ಯುತ್ ದರ ಏರಿಕೆಯಾಗಲಿದೆ. ಪ್ರತಿ ಯೂನಿಟ್ಗೆ ಇಷ್ಟು ಪೈಸೆಯಂತೆ ಏರಿಕೆ ಮಾಡಲಾಗುತ್ತಿದ್ದ ಪದ್ಧತಿಯ ಬದಲು, ಗ್ರಾಹಕರ ಕೆ.ವಿ ಸಾಮರ್ಥ್ಯ ಆಧರಿಸಿ ದರ ಹೆಚ್ಚಳವಾಗಲಿದೆ.

ಹಾಲು, ಮೊಸರು ಲೀಟರ್ಗೆ ₹4 ಹೆಚ್ಚಳ

ಬೆಂಗಳೂರು:ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಏಪ್ರಿಲ್ 1ರಿಂದ ಪ್ರತಿ ಲೀಟರ್ಗೆ ₹4 ಹೆಚ್ಚಳ ಆಗಲಿದೆ.

ದರ ಪರಿಷ್ಕರಿಸುವಂತೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ‘ಹೆಚ್ಚಳ ಮಾಡಿದ ಸಂಪೂರ್ಣ ಮೊತ್ತವನ್ನು ಹಾಲು ಉತ್ಪಾದಕರಿಗೆ ನೇರವಾಗಿ ನೀಡಲಾಗುವುದು’ ಎಂದರು.

ಸದ್ಯ ರೈತರಿಗೆ ಪ್ರತಿ ಲೀಟರ್ ಹಾಲು ಶೇಖರಣೆಗೆ ಕೆಎಂಎಫ್ ₹31.68 ದರ ನೀಡುತ್ತಿದೆ. ಹಾಲಿನ ಮಾರಾಟ ದರ ಪರಿಷ್ಕರಣೆಯ ನಂತರ ₹35.68 ಸಿಗಲಿದೆ. ‘2024ರ ಜೂನ್ 26ರಂದು ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ 50 ಮಿಲಿಯಷ್ಟು ನೀಡಿ ದರವನ್ನು ₹2ರಂತೆ (₹42ರಿಂದ ₹44) ಹೆಚ್ಚಿಸಲಾಗಿತ್ತು. ಈ ಹೆಚ್ಚಳವನ್ನು ಹಿಂಪಡೆದು, ಮೊದಲಿದ್ದ ದರಕ್ಕೆ (₹42) ₹4 ಹೆಚ್ಚಿಸಲಾಗುವುದು’ ಎಂದು ವೆಂಕಟೇಶ್ ತಿಳಿಸಿದರು.

‘ಹಾಲು ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಕಾರಣ ಮಾರಾಟ ದರ ಹೆಚ್ಚಿಸುವಂತೆ ರೈತರು ಬಹಳ ದಿನಗಳಿಂದ ಒತ್ತಡ ಹಾಕುತ್ತಿದ್ದರು. ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚ ಪರಿಗಣಿಸಿ, ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ದರ ಪರಿಷ್ಕರಿಸುವಂತೆ ಹಾಲು ಒಕ್ಕೂಟಗಳೂ ಪ್ರಸ್ತಾವ ಸಲ್ಲಿಸಿದ್ದವು’ ಎಂದರು.

ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ‘ಪಶು ಆಹಾರ ಉತ್ಪಾದನೆಗೆ ಬಳಸುವ ಮೆಕ್ಕೆಜೋಳ, ಅಕ್ಕಿತೌಡು, ಹತ್ತಿಕಾಳು ಹಿಂಡಿ, ಖನಿಜ ಪದಾರ್ಥಗಳ ಬೆಲೆ ಶೇ 35ರಿಂದ ಶೇ 40ರಷ್ಟು ಹೆಚ್ಚಳವಾಗಿದೆ. ಹೈನುರಾಸುಗಳ ನಿರ್ವಹಣಾ ವೆಚ್ಚ ಕೂಡಾ ಅಧಿಕವಾಗಿದೆ. ಹಾಲು ಒಕ್ಕೂಟದವರು ₹ 5 ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ಹಾಗೆಂದು, ಲಾಭ, ನಷ್ಟದ ಲೆಕ್ಕಾಚಾರದಲ್ಲಿ ದರ ಪರಿಷ್ಕರಿಸಿಲ್ಲ. ಹಾಲು ಉತ್ಪಾದಕರಿಗೆ ನೆರವು ನೀಡಬೇಕೆಂಬ ಉದ್ದೇಶದಿಂದ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ಸಮರ್ಥನೆ ನೀಡಿದರು.

‘ಪ್ರಿಂಟಿಂಗ್ ಮಷಿನ್ ಇದೆಯಾ?’

ಹಾಲು ಉತ್ಪಾದಕರಿಗೆ ಸರ್ಕಾರದಿಂದಲೇ ಪ್ರೋತ್ಸಾಹಧನ ಏಕೆ ನೀಡಬಾರದು ಎಂಬ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ಸರ್ಕಾರದ ಬಳಿ ಪ್ರಿಂಟಿಂಗ್ ಮಷಿನ್ ಇದೆಯಾ? ಪ್ರೋತ್ಸಾಹಧನ ಕೊಡಲು ಜನರು ಕೊಡುತ್ತಿರುವ ತೆರಿಗೆಯಿಂದಲೇ ನೀಡಬೇಕಲ್ಲವೇ’ ಎಂದು ಪ್ರಶ್ನಿಸಿದರು.

‘ದರ ಏರಿಕೆಯಿಂದ ಯಾವ ಒಕ್ಕೂಟಗಳಿಗೂ ಹಣ ಬರುವುದಿಲ್ಲ. ಪಶು ಆಹಾರ ಹಿಂದೆ ₹400ಕ್ಕೆ ಸಿಗುತ್ತಿತ್ತು. ಈಗ ₹700ಕ್ಕೆ ಏರಿಕೆ ಆಗಿದೆ. ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ’ ಎಂದರು.

ವಿದ್ಯುತ್ ದರ: ಭಾರಿ ಭಾರ

ಗೃಹ ಬಳಕೆ ವಿದ್ಯುತ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಒಪ್ಪಿಗೆ ನೀಡಿದ್ದು, ಇದೇ ಏಪ್ರಿಲ್ 1ರಿಂದ ಪರಿಷ್ಕತ ದರ ಜಾರಿಗೆ ಬರಲಿದೆ.

‘ಗೃಹ ಬಳಕೆ ವಿದ್ಯುತ್ನ ಪ್ರತಿ ಯೂನಿಟ್ ದರವನ್ನು ₹5.90ರಿಂದ ₹5.80ಕ್ಕೆ (10 ಪೈಸೆಗಳಷ್ಟು) ಇಳಿಕೆ ಮಾಡುತ್ತಿದ್ದೇವೆ’ ಎಂದು ಕೆಇಆರ್ಸಿ ಹೇಳಿದೆ. ಒಂದೆಡೆ, ಗ್ರಾಹಕರಿಗೆ ಮಂಜೂರಾದ ಕೆ.ವಿ ಸಾಮರ್ಥ್ಯ ಆಧರಿಸಿ ನಿಗದಿತ ಶುಲ್ಕವನ್ನು ವಿಪರೀತ ಹೆಚ್ಚಿಸಿದ್ದು (ಪ್ರತಿ ಕೆ.ವಿಗೆ ₹25 ಏರಿಕೆ), ಇನ್ನೊಂದೆಡೆ ಪಿಂಚಣಿ ಮತ್ತು ಗ್ರಾಚ್ಯುಟಿ ಹಣಕ್ಕೆ ಸಂಬಂಧಿಸಿದಂತೆ ಪ್ರತಿ ಯುನಿಟ್ಗೆ 36 ಪೈಸೆ ಶುಲ್ಕ ವಿಧಿಸಿದೆ. ಪರಿಣಾಮವಾಗಿ ವಿದ್ಯುತ್ ಬಳಕೆಯ ಶುಲ್ಕ ವಿಪರೀತ ಏರಿಕೆಯಾಗಲಿದೆ.

ಸದ್ಯ ಗೃಹಬಳಕೆ (ಎಲ್ಟಿ–1) ವಿದ್ಯುತ್ ಸಂಪರ್ಕದಲ್ಲಿ ಪ್ರತಿ ಕೆ.ವಿಗೆ ₹120 ನಿಗದಿತ ಶುಲ್ಕ ವಿಧಿಸಲಾಗುತ್ತಿತ್ತು. ಇದನ್ನು ₹145ಕ್ಕೆ ಹೆಚ್ಚಿಸಲಾಗಿದೆ.

ಉದಾಹರಣೆಗೆ: ಮೂರು ಕೆ.ವಿಯ ಮಂಜೂರಾದ ಸಂಪರ್ಕಕ್ಕೆ ಈಗ ₹360 ನಿಗದಿತ ಶುಲ್ಕ ಪಾವತಿಸಬೇಕಿದೆ. ಪರಿಷ್ಕೃತ ದರ ಜಾರಿಯ ನಂತರ ₹435 ಪಾವತಿಸಬೇಕಾಗುತ್ತದೆ. ಪ್ರತಿ ಯೂನಿಟ್ ದರವನ್ನು 10 ಪೈಸೆ ಕಡಿಮೆ ಮಾಡಿರುವುದರಿಂದ 100 ಯೂನಿಟ್ನ ದರ ₹590ರಿಂದ ₹580ಕ್ಕೆ ಇಳಿಕೆಯಾ ಗುತ್ತದೆ. ಆದರೆ ಪ್ರತಿ ಯೂನಿಟ್ಗೆ 36 ಪೈಸೆಯ ಪಿಂಚಣಿ ಮತ್ತು ಗ್ರಾಚ್ಯುಟಿ ವೆಚ್ಚ ಸೇರಿ ₹36ರಷ್ಟು ಏರಿಕೆಯಾಗುತ್ತದೆ. ಪರಿಣಾಮವಾಗಿ 100 ಯೂನಿಟ್ಗೆ ₹616 ಪಾವತಿಸಬೇಕಾಗುತ್ತದೆ.

ಕೈಗಾರಿಕೆ, ಖಾಸಗಿ ಸಂಸ್ಥೆಗಳಿಗೆ ಅನುಕೂಲ

ಎಲ್ಟಿ–5 ಕೈಗಾರಿಕಾ ವಿದ್ಯುತ್ ಸಂಪರ್ಕ ಹೊಂದಿರುವವರಿಗೆ ಪ್ರತಿ ಯೂನಿಟ್ ದರದಲ್ಲಿ ₹1.60ರಷ್ಟು ಕಡಿತ ಮಾಡಿದೆ. ಎಲ್ಟಿ–5 ಸಂಪರ್ಕಕ್ಕೆ ಪ್ರತಿ ಯುನಿಟ್ಗೆ ಈಗ ₹6.10 ಇಂಧನ ಶುಲ್ಕ ವಿಧಿಸುತ್ತಿದ್ದು, ಅದನ್ನು ₹4.50ಕ್ಕೆ ಇಳಿಕೆ ಮಾಡಲಾಗಿದೆ. ನಿಗದಿತ ಶುಲ್ಕವನ್ನು ₹140ರಿಂದ ₹150ಕ್ಕೆ ಹೆಚ್ಚಳ ಮಾಡಿದ್ದರೂ, ಇಂಧನ ಶುಲ್ಕ ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಿರುವುದರಿಂದ ಕೈಗಾರಿಕೆಗಳ ವಿದ್ಯುತ್ ಹೊರೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ಖಾಸಗಿ ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳು, ಖಾಸಗಿ ಜಾಹೀರಾತು ಹೋರ್ಡಿಂಗ್ಗಳ ಇಂಧನ ಶುಲ್ಕವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿದೆ. ಅವುಗಳ ವಿವರ ಈ ಮುಂದಿನಂತಿದೆ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.