ಬೆಂಗಳೂರು: ಕರ್ತವ್ಯದ ವೇಳೆ ಮೃತಪಟ್ಟಿರುವ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬವರಿಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ತಲಾ ₹1 ಕೋಟಿ ಪರಿಹಾರದ ಚೆಕ್ ಅನ್ನು ಬುಧವಾರ ವಿತರಿಸಿದರು.

ವಿದ್ಯುತ್ ಆಘಾತದಲ್ಲಿ ಮೃತಪಟ್ಟ ಗೌರಿಬಿದನೂರು ಉಪ ವಿಭಾಗದ ಸಹಾಯಕ ಪವರ್ಮ್ಯಾನ್ ಉದಯ ಕುಮಾರ್ ಅವರ ಪತ್ನಿ ವಿ. ಕೀರ್ತನಾ, ರಸ್ತೆ ಅಪಘಾತಗಳಲ್ಲಿ ಮೃತರಾದ ಗುಡಿಬಂಡೆ ಉಪ ವಿಭಾಗದ ಪವರ್ಮ್ಯಾನ್ ಬಿ.ವಿ. ಮಂಜಪ್ಪ ಅವರ ಪತ್ನಿ ದಾಕ್ಷಾಯಿಣಿ ಹಾಗೂ ಚಿಂತಾಮಣಿ ಉಪ ವಿಭಾಗದ ಪವರ್ ಮ್ಯಾನ್ ಅಮರನಾಥ್ ಅವರ ಪತ್ನಿ ಮುನಿರತ್ನಮ್ಮ ಅವರು ಸಚಿವರಿಂದ ಪರಿಹಾರದ ಚೆಕ್ ಸ್ವೀಕರಿಸಿದರು.

‘ಇಲಾಖೆಯ ಸಿಬ್ಬಂದಿ, ಪವರ್ಮ್ಯಾನ್ ಸುರಕ್ಷತೆಗೆ ರಕ್ಷಣಾ ಸಾಧನ ಒದಗಿಸಲಾಗುತ್ತಿದೆ. ಆದರೂ, ಅನಿರೀಕ್ಷಿತ ಘಟನೆಗಳಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬದವರಿಗೆ ನೆರವು ನೀಡಲಾಗುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸೂಪರ್ ವೇತನ ಖಾತೆ ವಿಮಾ ಪ್ರಯೋಜನದಡಿ ಚೆಕ್ ಹಸ್ತಾಂತರಿಸಲಾಗಿದೆ’ ಎಂದು ಜಾರ್ಜ್ ತಿಳಿಸಿದರು.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾತ್ ಮನೋಹರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶಂಕರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.