ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಸ್ಯಸಂತೆ | ಉಸಿರುಗಟ್ಟುವ ವಾತಾವರಣದಲ್ಲಿ ಬದುಕು: ಅರುಣ್‌ ಸಾಗರ್‌ ವಿಷಾದ

Published 10 ಆಗಸ್ಟ್ 2024, 15:42 IST
Last Updated 10 ಆಗಸ್ಟ್ 2024, 15:42 IST
ಅಕ್ಷರ ಗಾತ್ರ

ಯಲಹಂಕ: ‘ಆಧುನೀಕರಣದ ಭರದಲ್ಲಿ ಪರಿಸರ ನಾಶವಾಗಿ, ಉಸಿರುಗಟ್ಟುವಂತಹ ವಾತಾವರಣದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ನಟ ಅರುಣ್‌ ಸಾಗರ್‌ ವಿಷಾದಿಸಿದರು.

ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಸಹಯೋಗದಲ್ಲಿ ಜಿಕೆವಿಕೆ ಆವರಣದಲ್ಲಿ ಆಯೋಜಿಸಿರುವ ಪರಿಸರ ದಿನಾಚರಣೆ ಮತ್ತು ಸಸ್ಯಸಂತೆ ಉದ್ಘಾಟಿಸಿ ಅವರು ಮಾತನಾಡಿದರು.

‘ಭೂಮಿ ಕೊಟ್ಟಂತಹ ಅವಕಾಶ ಮತ್ತು ಸ್ವಾತಂತ್ರ್ಯವನ್ನು ತುಂಬಾ ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದೇವೆ. ಪರಿಸರವನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಹಳೆಯ ಸಾಂಪ್ರದಾಯಿಕ ಜೀವನಪದ್ಧತಿಯ ಜೊತೆಗೆ ನಾವೆಲ್ಲರೂ ಸಾಗಬೇಕಾಗಿದೆ. ‘ಪರಿಸರದ ಜೊತೆಗೆ ನಮ್ಮ ಬದುಕು- ನಮ್ಮ ಬದುಕಿನಿಂದ ಪರಿಸರ ಅಲ್ಲ’ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದರು.

ಸಸ್ಯ ಸಂತೆಯಲ್ಲಿ ಅಲಂಕೃತಗೊಳಿಸಿರುವ ನವಧಾನ್ಯ
ಸಸ್ಯ ಸಂತೆಯಲ್ಲಿ ಅಲಂಕೃತಗೊಳಿಸಿರುವ ನವಧಾನ್ಯ

ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ(ಬಾಗಲಕೋಟೆ) ಸಂಶೋಧನಾ ನಿರ್ದೇಶಕ ಡಾ.ಎಚ್‌.ಸಿ.ಮಹೇಶಪ್ಪ ಮಾತನಾಡಿ, ‘ಪ್ರವಾಹ, ಭೂಕುಸಿತ, ಹವಾಮಾನ ವೈಪರೀತ್ಯಗಳು ಸಂಭವಿಸಿ, ಪರಿಸರದ ಮೇಲೆ ಎಷ್ಟೇ ದುರಂತಗಳು ನಡೆದರೂ ನಾವು ಎಚ್ಚೆತ್ತುಕೊಳ್ಳದೇ ಇರುವುದು ವಿಷಾದದ ಸಂಗತಿ’ ಎಂದು ಹೇಳಿದರು.

ತೋಟಗಾರಿಕಾ ಮಹಾವಿದ್ಯಾಲಯದ ಡೀನ್‌ ಡಾ.ಜಿ.ಎಸ್‌.ಕೆ.ಸ್ವಾಮಿ, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಮಹೇಶ ಬಿ. ಶಿರೂರ, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ನಿರ್ದೇಶಕ ಡಾ.ಆರ್‌.ಕೆ. ಮೇಸ್ತ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಸ್ತರಣಾ ನಿರ್ದೇಶಕ ಡಾ.ಎಸ್‌.ಎಲ್‌.ಜಗದೀಶ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT