ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌: ಬಹುಕೇಂದ್ರ ಅರ್ಜಿ ಇತ್ಯರ್ಥ

Last Updated 16 ಜೂನ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ) ತನ್ನ ಸದಸ್ಯರ ಅನುಕೂಲಕ್ಕಾಗಿ ಬಹುಕೇಂದ್ರ ಅರ್ಜಿಗಳನ್ನು ಇತ್ಯರ್ಥ ಮಾಡಲು ನಿರ್ಧರಿಸಿದೆ. ಅಂದರೆ, ದೇಶದಲ್ಲಿ ಯಾವುದೇ ಭವಿಷ್ಯನಿಧಿ ಕಚೇರಿಯ ಅರ್ಜಿಯನ್ನು ಆನ್‌ಲೈನ್‌ನಲ್ಲಿಯೇ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ.

ಕೋವಿಡ್‌–19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಸದಸ್ಯರ ಅನುಕೂಲಕ್ಕಾಗಿ ಇಪಿಎಫ್‌ಒ ಈ ಕ್ರಮ ಕೈಗೊಂಡಿದೆ. ಪಿಎಫ್‌, ಪಿಂಚಣಿ, ಭಾಗಶಃ ಹಿಂತೆಗೆತ ಮತ್ತು ವರ್ಗಾವಣೆ ಅರ್ಜಿಗಳನ್ನು ಆನ್‌ಲೈನ್‌ನಲ್ಲಿಯೇ ಇತ್ಯರ್ಥ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಕೆಲವು ರಾಜ್ಯಗಳಲ್ಲಿ ಅರ್ಜಿಗಳ ಸಂಖ್ಯೆ ಅತಿ ಹೆಚ್ಚಾಗಿದ್ದು, ಕೆಲವು ರಾಜ್ಯಗಳಲ್ಲಿ ಕಡಿಮೆ ಇದೆ. ಆದರೆ, ಎಲ್ಲ ರಾಜ್ಯಗಳಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಅರ್ಜಿಗಳನ್ನು ಏಕರೂಪವಾಗಿ ಹಂಚಿಕೆ ಮಾಡಲು ಸಂಘಟನೆಯು ಆನ್‌ಲೈನ್‌ ವ್ಯವಸ್ಥೆಯ ಮೊರೆ ಹೋಗಿದೆ. ಯಾವುದೇ ಭೌಗೋಳಿಕ ವ್ಯಾಪ್ತಿ ಈಗ ಅನ್ವಯ ಆಗುವುದಿಲ್ಲ.

ಪಿಎಫ್‌ ಮುಂಗಡ ಹಣವನ್ನು ಈಗ ಮೂರು ದಿನಗಳಲ್ಲಿ ಪಾವತಿಸಲಾಗುತ್ತಿದೆ. ಈ ಸ್ವಯಂ ಇತ್ಯರ್ಥ ವ್ಯವಸ್ಥೆಯನ್ನು
(ಆಟೊ ಸೆಟ್ಲಮೆಂಟ್‌ ಮೋಡ್‌) ಸದಸ್ಯರು ಬಳಸಿಕೊಳ್ಳಬೇಕು ಎಂದು ಇಪಿಎಫ್‌ಒ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT