ಸೋಮವಾರ, ಮೇ 23, 2022
30 °C
ಖಾರದ ಪುಡಿ ಎರಚಿ ಪರಾರಿ

ಬೆಂಗಳೂರು: ಮಾಜಿ ಸೈನಿಕನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೊಮ್ಮಲೂರು ಬಳಿಯ ಗೌತಮ್‌ ನಗರದಲ್ಲಿ ಮಾಜಿ ಸೈನಿಕ ಸುರೇಶ್ ಉರ್ಪ್ ಜುಡೆ (56) ಎಂಬುವರನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದ್ದು, ಸಂಬಂಧಿಕರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

‘ಸೇನೆಯಿಂದ ನಿವೃತ್ತರಾದ ಬಳಿಕ ಸುರೇಶ್ ಅವರು ಒಂಟಿಯಾಗಿ ನೆಲೆಸಿದ್ದರು. ಬುಧವಾರ ಅವರ ಮನೆಗೆ ಬಂದಿದ್ದ ಆರೋಪಿಗಳು, ಹತ್ಯೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಸುರೇಶ್ ಹಾಗೂ ಸಂಬಂಧಿಕರ ನಡುವೆ ಆಸ್ತಿ ವಿಚಾರವಾಗಿ ಆಗಾಗ ಗಲಾಟೆ ಆಗುತ್ತಿತ್ತು. ಈ ಬಗ್ಗೆ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಆಸ್ತಿ ಕಾರಣಕ್ಕಾಗಿಯೇ ಸುರೇಶ್ ಅವರನ್ನು ಕೊಲೆ ಮಾಡಿರುವ ಅನುಮಾನವಿದೆ. ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿದರು.

‘ಪರಾರಿಯಾಗುವ ವೇಳೆಯಲ್ಲಿ ಆರೋಪಿಗಳು, ಮೃತದೇಹದ ಮೇಲೆ ಹಾಗೂ ಸುತ್ತಮುತ್ತ ಖಾರದ ಪುಡಿ ಎರಚಿ ಹೋಗಿದ್ದಾರೆ.’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು