ಬೆಂಗಳೂರು: ‘ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳು ಉಡುಗೊರೆ ಆಮಿಷವೊಡ್ಡಿ ₹ 5.20 ಲಕ್ಷ ಪಡೆದು ವಂಚಿಸಿದ್ದಾಳೆ’ ಎಂದು ಆರೋಪಿಸಿ ವಕೀಲೆ ಮಧುಮತಿ ಎಂಬುವರು ಕೇಂದ್ರ ವಿಭಾಗದ ಸೆನ್ ಠಾಣೆಗೆ ದೂರು ನೀಡಿದ್ದಾರೆ.

‘ಮಲ್ಲೇಶ್ವರ ನಿವಾಸಿ ಮಧುಮತಿ ನೀಡಿರುವ ದೂರು ಆಧರಿಸಿ ಆರೋಪಿಗಳಾದ ಎಡ್ವಿನ್ ಆಂಡ್ರ್ಯೂ ಹಾಗೂ ನ್ಯಾನ್ಸಿ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಧುಮತಿ ಅವರಿಗೆ ಫೇಸ್‌ಬುಕ್‌ನಲ್ಲಿ ಎಡ್ವಿನ್ ಆಂಡ್ರ್ಯೂ ಪರಿಚಯವಾಗಿ ಸ್ನೇಹವಾಗಿತ್ತು. ನಂತರ ಇಬ್ಬರೂ ಚಾಟಿಂಗ್ ಮಾಡುತ್ತಿದ್ದರು. ತಮ್ಮ ಪುತ್ರಿಯ ಹುಟ್ಟುಹಬ್ಬ ಇರುವ ವಿಚಾರವನ್ನು ಮಧುಮತಿ, ಆರೋಪಿಗೆ ಹೇಳಿದ್ದರು. ಅವಾಗಲೇ ಎಡ್ವಿನ್, ಶುಭಾಶಯ ಕೋರಿ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದರು.’

‘ದೆಹಲಿ ಕಸ್ಟಮ್ಸ್ ಅಧಿಕಾರಿ ಎಂದು ಹೇಳಿಕೊಂಡು ಜೂ.8ರಂದು ಮಧುಮತಿ ಅವರಿಗೆ ಕರೆ ಮಾಡಿದ್ದ ಇನ್ನೊಬ್ಬ ಯುವತಿ ನ್ಯಾನ್ಸಿ, ‘ನಿಮ್ಮ ಹೆಸರಿಗೆ ಪಾರ್ಸೆಲ್ ಬಂದಿದೆ’ ಎಂದಿದ್ದರು. ಆ ಬಗ್ಗೆ ಎಡ್ವಿನ್‌ಗೆ ಕರೆ ಮಾಡಿ ವಿಚಾರಿಸಿದಾಗ, ತಾನೇ ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿದ್ದರು’ ಎಂದೂ ಪೊಲೀಸರು ಹೇಳಿದರು.

ಪುನಃ ಕರೆ ಮಾಡಿದ್ದ ನ್ಯಾನ್ಸಿ, 'ಪಾರ್ಸೆಲ್‌ನಲ್ಲಿ ದುಬಾರಿ ಬೆಲೆಯ ವಸ್ತುಗಳಿವೆ. ₹5.20 ಲಕ್ಷ ಶುಲ್ಕ ಪಾವತಿಸಬೇಕು’ ಎಂದಿದ್ದಳು. ಅದನ್ನು ನಂಬಿದ್ದ ಮಧುಮತಿ, ಆರೋಪಿ ಹೇಳಿದ್ದ ಖಾತೆಗೆ ಹಣ ಸಂದಾಯ ಮಾಡಿದ್ದರು. ಅದಾದ ನಂತರ ಆರೋಪಿಗಳಿಬ್ಬರೂ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ದೂರುದಾರರು ಹೇಳುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.