ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಪ್ರೀತಿಸಿ, ಅತ್ಯಾಚಾರ!

ವೇಶ್ಯೆಯರಿಗೆ ಕದ್ದ ಹಣ, ಚಿನ್ನ
Last Updated 15 ಏಪ್ರಿಲ್ 2020, 21:12 IST
ಅಕ್ಷರ ಗಾತ್ರ

ಬೆಂಗಳೂರು: ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರನ್ನು ಪ್ರೀತಿಸುವುದಾಗಿ ನಂಬಿಸಿ, ಬೆದರಿಸಿ ಅತ್ಯಾಚಾರ ಎಸಗಿ ಹಣ, ಚಿನ್ನಾಭರಣ ದೋಚುತ್ತಿದ್ದ ಆರೋಪಿಯನ್ನು ನಂದಿನಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಮಧುಗಿರಿ ತಾಲ್ಲೂಕಿನ ಅಭಿಷೇಕ್ ಗೌಡ ಅಲಿಯಾಸ್‌ ಧನುಶ್‌ (26) ಬಂಧಿತ. ಆರೋಪಿಯಿಂದ ₹10.88 ಲಕ್ಷ ಮೌಲ್ಯದ 272 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ನಂದಿನಿ ಲೇಔಟ್‌ ಠಾಣೆಯಲ್ಲಿ ಬಾಲಕಿಯೊಬ್ಬಳ ತಂದೆ ನೀಡಿದ ದೂರಿನ ಆಧಾರದಲ್ಲಿ ಅಭಿಷೇಕ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತನ ‘ಚರಿತ್ರೆ’ ಬಯಲಾಗಿದೆ.

‘ತನ್ನ 17 ವರ್ಷದ ಮಗಳನ್ನು ಅಭಿಷೇಕ್‌ ಗೌಡ ಎಂಬಾತ ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡು ನಂದಿನಿ ಲೇಔಟ್‌ನ ಪಾರ್ಕ್‌ನಲ್ಲಿ ಭೇಟಿ ಮಾಡಿ ಪ್ರೀತಿಸುವುದಾಗಿ ಹೇಳಿದ್ದ. ಬಳಿಕ ತಾನು ಕಷ್ಟದಲ್ಲಿದ್ದೇನೆ ಎಂದು ಹೇಳಿ, ಆಕೆಯಿಂದ ಚಿನ್ನ ಮತ್ತು ಹಣ ಪಡೆದುಕೊಂಡಿದ್ದ. ವಾಪಸು ಕೇಳಿದಾಗ ಪುಸಲಾಯಿಸಿ ಕರೆದುಕೊಂಡು ವಸತಿಗೃಹವೊಂದರಲ್ಲಿ ಅತ್ಯಾಚಾರ ಎಸಗಿದ್ದ’ ಎಂದು ದೂರಿನಲ್ಲಿ ಬಾಲಕಿಯ ತಂದೆ ಆರೋಪಿಸಿದ್ದರು.

ಆರೋಪಿಯನ್ನು ಪೊಲೀಸರುವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಮಧುಗಿರಿ ಠಾಣೆಯಲ್ಲಿ ಆತನ ಹೆಸರು ರೌಡಿಪಟ್ಟಿಯಲ್ಲಿ ಸೇರಿಸಿರುವುದು ಗೊತ್ತಾಗಿದೆ. ಅಲ್ಲದೆ, ಫೇಸ್‌ಬುಕ್‌ನಲ್ಲಿ ಅಭಿಷೇಕ ಗೌಡ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಮಾಯಕ ಹೆಣ್ಣು ಮಕ್ಕಳನ್ನು ಪರಿಚಯಿಸಿಕೊಂಡು, ಪ್ರೀತಿಸುವ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿರುವುದು ಬಯಲಿಗೆ ಬಂದಿದೆ. ದೂರುದಾರ ವ್ಯಕ್ತಿಯ ಮಗಳನ್ನು 2019ರಲ್ಲಿ ಪರಿಚಯಿಸಿಕೊಂಡು ಅತ್ಯಾಚಾರ ಎಸಗಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT