ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೇರ್‌ಫ್ಯಾಕ್ಸ್‌’ ಸಂಸ್ಥೆಯಿಂದ ಕೋವಿಡ್ ಆರೈಕೆ ಕೇಂದ್ರ

Last Updated 12 ಮೇ 2021, 17:02 IST
ಅಕ್ಷರ ಗಾತ್ರ

ಬೆಂಗಳೂರು: ‘ಫೇರ್‌ಫ್ಯಾಕ್ಸ್‌’ ಹಣಕಾಸು ಕಂಪನಿಯು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ 150 ಹಾಸಿಗೆಗಳ ಆಮ್ಲಜನಕ ಸಹಿತ ಕೋವಿಡ್‌ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲು ಮುಂದಾಗಿದೆ.

ಇದೇ 18ರಿಂದ ಈ ಕೇಂದ್ರ ಕಾರ್ಯಾಚರಣೆ ಆರಂಭಿಸಲಿದೆ. ಈ ಕೇಂದ್ರಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೌಂಡೇಷನ್(ಕೆ.ಐ.ಎ.ಎಫ್) ಕೂಡ ಹಣಕಾಸಿನ ನೆರವು ನೀಡಲಿದೆ. ಫೇರ್‌ ಫ್ಯಾಕ್ಸ್‌ನ ಹೂಡಿಕೆ ಕಂಪನಿಯಾದ ಕ್ವೆಸ್‌ ಕಾರ್‌ ಲಿಮಿಟೆಡ್‌ ಮತ್ತು ಕೆಐಎಎಫ್‌ ಈ ಕೇಂದ್ರವನ್ನು ನಿರ್ವಹಿಸಲಿವೆ.

ಆಸ್ಪತ್ರೆಯೊಂದಕ್ಕೆ ಪ್ರವೇಶ ಲಭ್ಯವಾಗುವವರೆಗೆ ಆಮ್ಲಜನಕದ ಬೆಂಬಲ ಅಗತ್ಯವಿರುವ ರೋಗಿಗಳಿಗೆ ಪರಿಹಾರ ಮತ್ತು ಚಿಕಿತ್ಸೆಯನ್ನು ಇದು ಪೂರೈಸಲಿದೆ.

ಡಾ. ನರೇಶ್ ಶೆಟ್ಟಿ, ಡಾ. ನಂದಕುಮಾರ್ ಜೈರಾಮ್ ಮತ್ತು ಡಾ. ಅಲೆಕ್ಸಾಂಡರ್ ಥಾಮಸ್ ಸೇರಿದಂತೆ ಪರಿಣತ ವೈದ್ಯರ ಸಮಿತಿಯು ಈ ಕೇಂದ್ರದ ಕಾರ್ಯನಿರ್ವಹಣೆಗೆ ತಾಂತ್ರಿಕ ನೆರವನ್ನು ಪೂರೈಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT