ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯ ಫಾಲಿಂಗ್ ವಾಲ್ಸ್‌ ಪ್ರತಿಷ್ಠಾನ ಪಟ್ಟಿ: ಶರ್ಮಾ, ಶ್ರೀನಿಧಿಗೆ ಸ್ಥಾನ

Last Updated 18 ಅಕ್ಟೋಬರ್ 2020, 20:08 IST
ಅಕ್ಷರ ಗಾತ್ರ

ಬೆಂಗಳೂರು: ಜರ್ಮನಿಯ ಫಾಲಿಂಗ್ ವಾಲ್ಸ್ ಪ್ರತಿಷ್ಠಾನ ಪ್ರಕಟಿಸುವ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿಯಲ್ಲಿ ಕನ್ನಡಿಗರಾದ ಕೊಳ್ಳೇಗಾಲ ಶರ್ಮಾ ಮತ್ತು ಟಿ.ಜಿ. ಶ್ರೀನಿಧಿ ಸ್ಥಾನ ಪಡೆದಿದ್ದಾರೆ. ವಿಜ್ಞಾನ ಸಂವಹನ ಪಟ್ಟಿಯ ಅಂತಿಮ ಸುತ್ತಿಗೆ ಇಬ್ಬರೂ ಆಯ್ಕೆಯಾಗಿದ್ದು, ಪ್ರತಿಷ್ಠಾನದ ವಾರ್ಷಿಕ ಸಮ್ಮೇಳನದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.

ಜರ್ಮನಿಯ ಬರ್ಲಿನ್ ಗೋಡೆಯನ್ನು ಕೆಡವಲಾಗಿದ್ದರ ನೆನಪಿನಲ್ಲಿ ನಡೆಯುವ ಈ ಸಮ್ಮೇಳನವು ವಿಜ್ಞಾನ ಪ್ರಸಾರಕ್ಕಿರುವ ಅಡ್ಡಗೋಡೆಗಳನ್ನು ನಿವಾರಿಸುವ ಉದ್ದೇಶ ಹೊಂದಿದೆ. ಈ ಸಮ್ಮೇಳನದ ಅಂಗವಾಗಿ ವರ್ಷದ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿ ಪ್ರಕಟಿಸಲಾಗಿದೆ.

ಹತ್ತು ವಿಭಾಗಗಳಲ್ಲಿ ನೂರಾರು ಸ್ಪರ್ಧಿಗಳು ಅಂತಿಮ ಸುತ್ತಿನಲ್ಲಿದ್ದಾರೆ. ಒಂದೊಂದು ವಿಭಾಗದಲ್ಲಿ ಒಬ್ಬೊಬ್ಬರಂತೆ 10 ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಕೊಳ್ಳೇಗಾಲ ಶರ್ಮಾ ಹಿರಿಯ ವಿಜ್ಞಾನ ಸಂವಹನಕಾರರು. ನಾಲ್ಕು ವರ್ಷಗಳಿಂದ ವಿಜ್ಞಾನದ ವಿಷಯಗಳನ್ನು ಧ್ವನಿರೂಪದಲ್ಲಿ ತಲುಪಿಸುತ್ತಿರುವ 'ಜಾಣಸುದ್ದಿ' ಸಂಚಿಕೆಗಳು ಪಾಡ್‌ಕಾಸ್ಟ್‌ನಲ್ಲಿ ಪ್ರಸಾರವಾಗುತ್ತಿವೆ. ಈ ಸರಣಿಗಾಗಿಯೇ ಶರ್ಮಾ ಅವರಿಗೆ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

ಇ–ಜ್ಞಾನ ಜಾಲತಾಣದ ಮೂಲಕ ವಿಜ್ಞಾನ–ತಂತ್ರಜ್ಞಾನದ ವಿಷಯಗಳನ್ನು ಕನ್ನಡದ ಓದುಗರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿರುವ ಟಿ.ಜಿ. ಶ್ರೀನಿಧಿ ಅವರ ‘ಕೊರೊನಾಲಜಿ’ ಸರಣಿ ಬರಹವನ್ನು ಪರಿಗಣಿಸಿ, ಈ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.

‘ಪ್ರತಿವರ್ಷ ಜರ್ಮನಿಯಲ್ಲಿಯೇ ಕಾರ್ಯಕ್ರಮ ನಡೆಯುತ್ತಿತ್ತು. ಕೋವಿಡ್ ಇರುವುದರಿಂದ ನ.8ರಂದು ವರ್ಚುವಲ್‌ ರೂಪದಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದು ಶ್ರೀನಿಧಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT