ಬೆಂಗಳೂರು: ರಾಜ್ಯಕ್ಕೆ ಉಗ್ರರು ನುಸುಳಿದ್ದಾರೆ ಎಂದು ವ್ಯಕ್ತಿಯೊಬ್ಬರು ಕರೆ ಮಾಡಿದ್ದ ಹಿನ್ನಲೆಯಲ್ಲಿ ರಾಜಧಾನಿಯಲ್ಲಿಕಟ್ಟೆಚ್ಚರ ವಹಿಸಲಾಗಿದೆ.

ನಗರದಲ್ಲಿನ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಾದ ಕೆಂಪೇಗೌಡ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಶನಿವಾರ ಬೆಳಿಗ್ಗೆ ಶ್ವಾನದಳದಿಂದ ತಪಾಸಣೆ ನಡೆಸಲಾಗಿದೆ.

ಇದನ್ನೂ ಓದಿ:ರಾಮನಾಥಪುರದಲ್ಲಿ 19 ಉಗ್ರರಿದ್ದಾರೆ ಎಂದುಡಿಜಿಪಿ ಬರೆದ ಪತ್ರ ವೈರಲ್

ಎಲ್ಲಾ ಜಿಲ್ಲಾಧಿಗಳು ಮತ್ತು ಭದ್ರತಾಧಿಕಾರಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದ್ದು, ಪ್ರತಿ ಗಂಟೆಗೊಮ್ಮೆ ಪೊಲೀಸ್ ನಿಯಂತ್ರಣ ಕೊಠಡಿಗೆ ವರದಿ ನೀಡಲು ತಿಳಿಸಲಾಗಿದೆ.

ಶುಕ್ರವಾರ ಸಂಜೆ ಬೆಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ವ್ಯಕ್ತಿ’ನಾನು ಹೊಸೂರಿನ ನಿವಾಸಿ ಆಗಿದ್ದು, ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಉಗ್ರರ ಬಗ್ಗೆ ಖಚಿತ ಮಾಹಿತಿ ಇದೆ. ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಗೋವಾ ಹಾಗೂ ಹಲವು ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿದ್ದಾರೆ' ಎಂದು ಹೇಳಿದ್ದನು.

ಇದನ್ನೂ ಓದಿ: ಹುಸಿ ಕರೆ ಮಾಡಿದ ಮಾಜಿ ಸೈನಿಕನ ಬಂಧನ

ನಿಯಂತ್ರಣ ಕೊಠಡಿಗೆ ಬಂದ ಮೊಬೈಲ್ ಕರೆ ಲೊಕೇಶನ್ ಆಧರಿಸಿ ಆ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದ್ದು, ಹುಸಿ ಕರೆ ಮಾಡಿದ್ದ ಆರೋಪದಡಿ ಮಾಜಿ ಸೈನಿಕ ಸುಂದರಮೂರ್ತಿ ಎಂಬುವರನ್ನು ಅವಲಹಳ್ಳಿ ಹಾಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹೀಗೆ ಬಂದ ಕರೆಯ ಆಧಾರದ ಮೇಲೆರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರುನೆರೆ ರಾಜ್ಯಗಳಿಗೆ ಕಳುಹಿಸಿದ್ದ ತುರ್ತು ಸಂದೇಶ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.