ಬೆಂಗಳೂರು: ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ತರಂಗ ಸಾಂಸ್ಕೃತಿಕ ಸಮಿತಿಯು ‘ಕೋಮು ಸಾಮರಸ್ಯಕ್ಕಾಗಿ ಭಾರತೀಯ ಹಬ್ಬಗಳು– ವಿವಿಧತೆಯಲ್ಲಿ ಏಕತೆ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು.

ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್ನ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಈ ಕಾರ್ಯಕ್ರಮವು ಭಾರತದ ಸಾಂಸ್ಕೃತಿಕ ವೈವಿಧ್ಯವನ್ನು ಅನಾವರಣಗೊಳಿಸಿತು. ಮಾತ್ರವಲ್ಲ, ಸಾಂಸ್ಕೃತಿಕ ಆಚರಣೆಗಳ ಮೂಲಕ ವಿವಿಧ ಸಮುದಾಯಗಳ ನಡುವಿನ ಒಳಗೊಳ್ಳುವಿಕೆ, ಪರಸ್ಪರ ಗೌರವಿಸುವುದನ್ನು ಒತ್ತಿ ಹೇಳಿತು.

ಪದವಿ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿಗಳಲ್ಲಿ ವಿಜಯ ದಶಮಿ, ಕೃಷ್ಣ ಜನ್ಮಾಷ್ಟಮಿ, ಹನುಮ ಜಯಂತಿ, ದುರ್ಗಾ ಪೂಜೆ, ಓಣಂ, ಸರಸ್ವತಿ ಪೂಜೆ, ಮಹಾ ಶಿವರಾತ್ರಿ, ರಾಮ ನವಮಿ, ವಿಷು, ತುಳಸಿ ಪೂಜೆ, ಯುಗಾದಿ, ದೀಪಾವಳಿ, ಕ್ರಿಸ್ಮಸ್, ವೈಕುಂಠ ಏಕಾದಶಿ, ಮಕರ ಸಂಕ್ರಾಂತಿ, ಗಣೇಶ, ಗೋವರ್ಧನ ಪೂಜೆ, ಗುರುನಾನಕ್ ಜಯಂತಿ ಸೇರಿದಂತೆ 52ಕ್ಕೂಹೆಚ್ಚು ವಿವಿಧ ಹಬ್ಬಗಳನ್ನು ಆಚರಿಸಿ, ಸಂಭ್ರಮಿಸಿದರು.

ವಿದ್ಯಾರ್ಥಿಗಳು ಎಲ್ಲ ಹಬ್ಬಗಳಲ್ಲೂ ಭಾಗವಹಿಸುವ ಮೂಲಕ, ಕೋಮು ಸಾಮರಸ್ಯ ಮತ್ತು ವಿವಿಧತೆಯಲ್ಲಿ ಏಕತೆಯ ಮಹತ್ವವನ್ನು ಸಾರಿದರು. ಭಾರತೀಯ ಹಬ್ಬಗಳು ವಿದ್ಯಾರ್ಥಿಗಳನ್ನು ನಂಬಿಕೆಗಳು ಮತ್ತು ಹಿನ್ನೆಲೆಗಳನ್ನು ಮೀರಿ ಒಟ್ಟುಗೂಡಿಸಿದವು. ವಿದ್ಯಾರ್ಥಿಗಳು ವಿವಿಧ ಹಬ್ಬಗಳನ್ನು ಆಚರಿಸುವ ಮೂಲಕ ಏಕತೆ, ಒಳಗೊಳ್ಳುವಿಕೆ ಮತ್ತು ವಿವಿಧ ಸಮುದಾಯಗಳನ್ನು ಗೌರವಿಸುವುದನ್ನು ಕಲಿತರು. ಅಲ್ಲದೇ, ವಿವಿಧ ಸಮುದಾಯಗಳ ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿ ಕೆ.ಕೃಷ್ಣಸ್ವಾಮಿ, ಶೇಷಾದ್ರಿಪುರಂ ಕಾಲೇಜಿನ ಪ್ರಾಚಾರ್ಯ ಐ. ಆನಂದಪ್ಪ, ನಿರ್ದೇಶಕರು, ಡೀನ್, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.