ಯಲಹಂಕ: ಕೆರೆಗಳಿಗೆ ಅಕ್ರಮವಾಗಿ ಕೊಳಚೆ ನೀರು ಬಿಡುವವರಿಗೆ ₹5 ಲಕ್ಷದವರೆಗೆ ದಂಡ ವಿಧಿಸುವುದರ ಜೊತೆಗೆ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲಾಗುವುದು’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಎಚ್ಚರಿಸಿದರು.

ಹಾರೋಹಳ್ಳಿ ಕೆರೆಯ ಆವರಣದಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಾರ್ವಜನಿಕರು ಕೆರೆಗಳಿಗೆ ಯಾವುದೇ ಕೊಳಚೆ ನೀರು ಸೇರದಂತೆ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

‘ಕೆರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆರೆಗಳು ಉಳಿದರೆ ನಮಗೆಲ್ಲ ಕುಡಿಯುವ ನೀರು ಸಿಗುತ್ತದೆ. ಪರಿಸರ ಚೆನ್ನಾಗಿರುತ್ತದೆ’ ಎಂದರು.

ಸಂಜೆ ವೇಳೆ ಮಹಿಳೆಯರು ಮತ್ತು ಮಕ್ಕಳು ವಾಯುವಿಹಾರಕ್ಕಾಗಿ ಕೆರೆಗೆ ಬರುತ್ತಿದ್ದರು. ಅವರಿಗೆ ಕತ್ತಲಲ್ಲಿ ವಾಕಿಂಗ್ ಮಾಡಲು ಭಯಪಡುತ್ತಿದ್ದರು. ಈ ದಿಸೆಯಲ್ಲಿ ಕೆರೆಯ ಸುತ್ತಲೂ ₹50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದರು.

ಜಲನಿಧಿ ಪ್ರತಿಷ್ಠಾನದ ಅಧ್ಯಕ್ಷ ಎನ್.ಶಿವಕುಮಾರ್, ಕಾರ್ಯಾಧ್ಯಕ್ಷ ಸಂಜೀವ್ ರೆಡ್ಡಿ, ಬಿಜೆಪಿ ಮುಖಂಡರಾದ ಮಧುಸೂದನನ್ ಎ.ಎನ್, ಕಿರಣ್.ಎಚ್.ಎಸ್, ಮಂಜುನಾಥ್, ಸುಧಾಕರ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.