ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಉಲ್ಲಂಘಿಸಿ ನೋಂದಣಿ: ಫ್ಲ್ಯಾಟ್‌ ಮಾಲೀಕರ ವಿರುದ್ಧ ಎಫ್‌ಐಆರ್‌

Published 9 ಜನವರಿ 2024, 15:52 IST
Last Updated 9 ಜನವರಿ 2024, 15:52 IST
ಅಕ್ಷರ ಗಾತ್ರ

ಬೆಂಗಳೂರು: ಅಪಾರ್ಟ್‌ಮೆಂಟ್‌ ಮಾಲೀಕರು ನೋಂದಣಿ ಮಾಡಬೇಕಿದ್ದ ‘ಡೀಡ್‌ ಆಫ್‌ ಡಿಕ್ಲರೇಷನ್‌’ ಅನ್ನು ಫ್ಲ್ಯಾಟ್ ಮಾಲೀಕರೊಬ್ಬರು ನಿಯಮ ಉಲ್ಲಂಘಿಸಿ ನೋಂದಣಿ ಮಾಡಿದ್ದು, ಈ ಸಂಬಂಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ರಸ್ತೆಯ ಕೈಲಾಸ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರ ಗಣಪತಿ ಹೆಗ್ಡೆ ಮತ್ತಿತರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?:

‘ಕೆಂಗೇರಿ ಉಪ ನೋಂದಣಾಧಿಕಾರಿ ಕಚೇರಿಯ ಹಿರಿಯ ನೋಂದಣಾಧಿಕಾರಿ ವೆಂಕಟೇಶ್‌ ಅವರು, ಅಕ್ಟೋಬರ್‌ 13ರಂದು ನೀಡಿದ್ದ ಲಿಖಿತ ದೂರಿನ ಬಗ್ಗೆ ಜ.2ರಂದು ಲಿಖಿತವಾಗಿ ಮಾಹಿತಿ ಪಡೆದಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‌‘ಆರೋಪಿ ಗಣಪತಿ ಹೆಗ್ಡೆ ಅವರು 2015ರ ಅಕ್ಬೋಬರ್‌ 16ರಂದು ತಮ್ಮ ಕಚೇರಿಯಲ್ಲಿ ಡೀಡ್‌ ಆಫ್‌ ಡಿಕ್ಲರೇಷನ್ ಅನ್ನು ನೋಂದಾಯಿಸಿದ್ದಾರೆ. ಆದರೆ, ಅವರಿಗೆ ಪತ್ರಗಳನ್ನು ಹಾಜರುಪಡಿಸಿ ನೋಂದಣಿ ಮಾಡಿಕೊಳ್ಳುವ ಅಧಿಕಾರ ಇಲ್ಲ. ಆದರೂ, ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಡೀಡ್‌ ಆಫ್‌ ಡಿಕ್ಲರೇಷನ್‌ ನೋಂದಣಿ ಮಾಡಿಕೊಂಡಿದ್ದಾರೆಂದು ದೂರುದಾರ ಕೆ.ಎಸ್‌.ರವಿಕುಮಾರ್ ಆರೋಪಿಸಿದ್ದಾರೆ. ಗಣಪತಿ ಅವರು ಒಂದು ಫ್ಲ್ಯಾಟ್‌ಗೆ ಮಾಲೀಕರಾಗಿದ್ದು, ಡೀಡ್‌ ಆಫ್‌ ಡಿಕ್ಲರೇಷನ್‌ ನೋಂದಣಿ ಮಾಡುವಾಗ ಕೆಲವು ವಿಚಾರಗಳನ್ನು ಮರೆಮಾಚಿದ್ದಾರೆ. ಸಿ.ಎನ್‌.ವಸಂತ, ಆರ್‌.ರಾಮಯ್ಯ, ಬಿ.ಎಂ.ನಾಗರಾಜು, ಎನ್‌.ಎಸ್‌.ವೆಂಕಟಚಲಪತಿ, ಬಿ.ಎನ್‌.ತಿಪ್ಪೇಸ್ವಾಮಿ, ಹರೀಶ್‌ಕುಮಾರ್‌, ಕಿರಣ್‌ಕುಮಾರ್‌, ಮುರಳೀಧರ್‌ ತಿಲಕ್‌ ಎಸ್. ತಲ್ಲಿಕೇರಿ, ಅರುಣ್‌ ಬಿ. ಕನ್ನೂರು, ಜಿ.ಶೈಲಜಾ, ರಾಘವೇಂದ್ರ, ಪ್ರಭಾಕರ್‌ ಮತ್ತಿತರರ ಪರವಾಗಿ ಜಿಪಿಎ ಹೋಲ್ಡರ್‌ ಗಣಪತಿ ಅವರು ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯ್ದೆ ಅನ್ನು ಉಲ್ಲಂಘಿಸಿ ನೋಂದಣಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT