ಬೆಂಗಳೂರು: ಭಾರತೀಯ ವಾಯುಪಡೆಯ ಪರೀಕ್ಷಾ ಪೈಲಟ್ ಶಾಲೆಯ 47ನೇ ವಿಮಾನ ಪರೀಕ್ಷಾ ಕೋರ್ಸ್ ಪೂರ್ಣಗೊಳಿಸಿದ ಅಧಿಕಾರಿಗಳಿಗೆ ಪದವಿ ಪ್ರದಾನ, ಅತ್ಯುತ್ತಮ ಸಾಧನೆ ಮಾಡಿದವರಿಗೆ ಟ್ರೋಫಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಏರ್ಕ್ರಾಫ್ಟ್ ಮತ್ತು ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್ನಲ್ಲಿ (ಎಎಸ್ಟಿಇ) ‘ಸುರಂಜನ್ ದಾಸ್ ಡಿನ್ನರ್’ ಕಾರ್ಯಕ್ರಮದ ಮೂಲಕ ಕೋರ್ಸ್ ಮುಕ್ತಾಯಗೊಂಡಿತು.

ವಾಯುಪಡೆಯ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಮಾತನಾಡಿ, ‘ವೃತ್ತಿಪರ ಸಾಮರ್ಥ್ಯ, ಸಮಗ್ರತೆ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡಲು ಪರೀಕ್ಷಾ ಹಾರಾಟ ಪ್ರಮುಖ ಪಾತ್ರ ವಹಿಸುತ್ತದೆ. ಈಗ ಪದವಿ ಪಡೆದವರು ಸಶಕ್ತ, ಸಕ್ಷಮ ಮತ್ತು ಆತ್ಮನಿರ್ಭರ ಭಾರತವನ್ನು ರೂಪಿಸುವಲ್ಲಿ ಅಗತ್ಯವಾದ ನಿಖರತೆ ಮತ್ತು ಶ್ರೇಷ್ಠತೆಯ ಮೂಲ ಮೌಲ್ಯಗಳನ್ನು ಎತ್ತಿಹಿಡಿಯಬೇಕು’ ಎಂದು ಸಲಹೆ ನೀಡಿದರು.

ವಿಮಾನ ಪರೀಕ್ಷಾ ಕೋರ್ಸ್ 48 ವಾರಗಳ ಅವಧಿಯ ಕಠಿಣ ತರಬೇತಿಯಾಗಿದೆ. ಅತ್ಯಾಧುನಿಕ ವೈಮಾನಿಕ ವೇದಿಕೆಗಳು ಮತ್ತು ವ್ಯವಸ್ಥೆಗಳಿಗಾಗಿ ರಾಷ್ಟ್ರದ ಹಾರಾಟ ಪರೀಕ್ಷಾ ಸಾಮರ್ಥ್ಯವನ್ನು ನಿರ್ಮಿಸುವ ಒಂದು ಮೂಲಾಧಾರವಾಗಿದೆ ಎಂದು ತಿಳಿಸಿದರು.

ಸರ್ವತೋಮುಖ ಸಾಧನೆಗಾಗಿ ‘ಸುರಂಜನ್ ದಾಸ್ ಟ್ರೋಫಿ’ಯನ್ನು ಸ್ಕ್ವಾಡ್ರನ್ ಲೀಡರ್ ಎಸ್. ಭಾರದ್ವಾಜ್ ಅವರಿಗೆ ಪ್ರದಾನ ಮಾಡಲಾಯಿತು. ಹಾರಾಟ ಮೌಲ್ಯಮಾಪನದಲ್ಲಿ ಅತ್ಯುತ್ತಮ ವಿದ್ಯಾರ್ಥಿ ಪರೀಕ್ಷಾ ಪೈಲಟ್ಗಾಗಿ ಇರುವ ‘ಚೀಫ್ ಆಫ್ ದಿ ಏರ್ ಸ್ಟಾಫ್ ಟ್ರೋಫಿ’ಯನ್ನು ಸ್ಕ್ವಾಡ್ರನ್ ಲೀಡರ್ ಅಜಯ್ ತ್ರಿಪಾಠಿ ಅವರಿಗೆ ನೀಡಲಾಯಿತು.

ಅತ್ಯುತ್ತಮ ಸರ್ವತೋಮುಖ ವಿದ್ಯಾರ್ಥಿ ಹಾರಾಟ ಪರೀಕ್ಷಾ ಎಂಜಿನಿಯರ್ಗಾಗಿ ಸ್ಕ್ವಾಡ್ರನ್ ಲೀಡರ್ ಸುಭ್ರಜ್ಯೋತಿ ಪಾಲ್ ಅವರಿಗೆ ‘ಮಹಾರಾಜ ಹನುಮಂತ್ ಸಿಂಗ್ ಸ್ವೋರ್ಡ್’, ಹಾರಾಟ ಮೌಲ್ಯಮಾಪನದಲ್ಲಿ ಅತ್ಯುತ್ತಮ ವಿದ್ಯಾರ್ಥಿ ಪರೀಕ್ಷಾ ಎಂಜಿನಿಯರ್ಗಾಗಿ ವಿಂಗ್ ಕಮಾಂಡರ್ ಅಶ್ವಿನಿ ಸಿಂಗ್ ಅವರಿಗೆ ‘ಡನ್ಲಪ್ ಟ್ರೋಫಿ’ ನೀಡಲಾಯಿತು.

ಭೂ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಮೇಜರ್ ಕೌಸ್ತುಭ್ ಕುಂಟೆ ಅವರಿಗೆ ‘ಕಪಿಲ್ ಭಾರ್ಗವ ಟ್ರೋಫಿ’ ಹಸ್ತಾಂತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.