ಭಾನುವಾರವೇ ನನಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆ ಇದೆ. ಅದಕ್ಕೂ ಹಾಗೂ ಸಿಇಟಿ ಪರೀಕ್ಷೆಗೂ ಉಪಯೋಗವಾಗಬಹುದು ಎಂದು ಹರಪನಹಳ್ಳಿಯಿಂದ ಬಂದೆ. ಮುಂದೆ ಯಾವ ಕೋರ್ಸ್ ಮಾಡಬಹುದು ಎಂಬ ಬಗ್ಗೆ ಇಲ್ಲಿ ನನಗೆ ಸ್ಪಷ್ಟತೆ ದೊರೆಯಿತು. ‘ಎಐ’ ವಿಷಯ ತಗೊಂಡು ಎಂಜಿನಿಯರಿಂಗ್ ಮಾಡಲು ನಿರ್ಧರಿಸಿದ್ದೇನೆ.-ಅಮೋಘ ಜಿ. ವಿದ್ಯಾರ್ಥಿ ಹರಪನಹಳ್ಳಿ
ಯಾವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಕು? ಯಾವ ವಿಷಯ ತೆಗೆದುಕೊಂಡರೆ ಒಳ್ಳೆಯದು ಎಂಬ ಪ್ರಶ್ನೆಗಳು ನನ್ನಲ್ಲಿತ್ತು. ಉತ್ತಮ ಗುಣಮಟ್ಟದ ಅನೇಕ ಕಾಲೇಜುಗಳ ವಿವರಗಳು ಇಲ್ಲಿ ಒಂದೇ ಕಡೆ ಸಿಕ್ಕಿತು. ‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ಎಲ್ಲ ಪ್ರಮುಖ ವಿದ್ಯಾಸಂಸ್ಥೆಗಳನ್ನು ಒಂದೆಡೆ ಸೇರಿಸಿ ಒಳ್ಳೆಯ ಕೆಲಸ ಮಾಡಿದೆ.ನಿಹಾರಿಕಾ ವಿದ್ಯಾರ್ಥಿನಿ ಚಿಕ್ಕಬಾಣಾವರ
ಸಾಫ್ಟ್‌ವೇರ್‌ಗಿಂತ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರವೇ ಚೆನ್ನಾಗಿದೆ ಎಂಬುದನ್ನು ‘ಎಡ್ಯುವರ್ಸ್’ನಲ್ಲಿ ಕಂಡುಕೊಂಡೆ. ಸಿಇಟಿಗೆ ತಯಾರಾಗುವ ಬಗೆ ಮುಂದಿನ ಕೋರ್ಸ್‌ಗಳ ಆಯ್ಕೆಗೆ ‘ಎಡ್ಯುವರ್ಸ್’ನಲ್ಲಿ ಮಾರ್ಗದರ್ಶನ ದೊರೆಯಿತು.ಮಧು ವಿದ್ಯಾರ್ಥಿ ನೆಲಮಂಗಲ
ನಮ್ಮ ಸುತ್ತಮುತ್ತಲಿನಲ್ಲಿ ಹಲವು ಕಾಲೇಜುಗಳಿವೆ. ಯಾವುದನ್ನು ಆಯ್ಕೆ ಮಾಡಬೇಕು? ಯಾವುದನ್ನು ಬಿಡಬೇಕು ಎಂಬ ಗೊಂದಲಗಳಿದ್ದವು. ಎಲ್ಲಿ ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯದು ಎಂಬ ಕಲ್ಪನೆ ಇರಲಿಲ್ಲ. ಬೇರೆ ಬೇರೆ ಕಾಲೇಜುಗಳಲ್ಲಿ ಬೇರೆ ಬೇರೆ ಕೋರ್ಸ್‌ಗಳಿವೆ. ಅದರಲ್ಲಿ ನಮಗೆ ಯಾವುದು ಸೂಕ್ತ ಎಂದು ಆಯ್ಕೆ ಮಾಡಿಕೊಳ್ಳುವ ಅವಕಾಶ ಸಿಕ್ಕಿತು.-ಯೋಗಶ್ರೀ ವಿದ್ಯಾರ್ಥಿನಿ ಬೈಯಪ್ಪನಹಳ್ಳಿ
‘ಎಡ್ಯುವರ್ಸ್’ ಸಮ್ಮೇಳನ ನಡೆಯುತ್ತಿದೆ ಎಂದು ತಂದೆ ತಿಳಿಸಿ ಇಲ್ಲಿಗೆ ಕರೆದುಕೊಂಡು ಬಂದರು. ಹೊಸಲೋಕ ಇಲ್ಲಿ ಅನಾವರಣಗೊಂಡಿದೆ. ಕಂಪ್ಯೂಟರ್ ಸೈನ್ಸ್ ತಗೊಬೇಕು ಎಂಬ ಯೋಚನೆ ಇದೆ. ಜತೆಗೆ ಬೇರೆ ಯಾವೆಲ್ಲ ಕೋರ್ಸ್‌ಗಳಿವೆ ಎಂದು ತಿಳಿಯಲು ಈ ಸಮ್ಮೇಳನ ಸಹಕಾರಿಯಾಯಿತು.ಐಶ್ವರ್ಯ ವಿದ್ಯಾರ್ಥಿನಿ ರಾಜಾಜಿನಗರ
ಈ ಕಾಲಕ್ಕೆ ಅಗತ್ಯ ಇರುವ ವಿಷಯ ಇಟ್ಟುಕೊಂಡು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮೇಳ ನಡೆಸುತ್ತಿದೆ. ಕಾಮೆಡ್–ಕೆ ನೀಟ್ ಬಗ್ಗೆ ಮಾಹಿತಿ ಮಾತ್ರವಲ್ಲ ಮುಂದೆ ಮಾಡಬೇಕಾದ ಕೋರ್ಸ್‌ಗಳ ಬಗ್ಗೆಯೂ ನಾವು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಕೌನ್ಸೆಲಿಂಗ್ ನಡೆಸಲು ಅವಕಾಶವಾಗಿದೆ.–ಶ್ರದ್ಧಾ ಲರ್ನ್‌ಟೆಕ್ ಸಮಾಲೋಚಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.