ಬೆಂಗಳೂರು: ‘ಲಗೋರಿ, ಗಾಳಿಪಟ ಹಾರಿಸುವಂತಹ ಗ್ರಾಮೀಣ ಆಟಗಳು ಆಧುನಿಕ ನಗರ ಜೀವನದ ಮಕ್ಕಳಿಗೆ ಅಪರೂಪ. ಸುಗ್ಗಿ ಹಬ್ಬದ ಈ ಸುಸಂದರ್ಭದಲ್ಲಿ ಅವರಿಗೆ ನಾಡಿನ ಶ್ರೀಮಂತ ಗ್ರಾಮೀಣ ಸಂಸ್ಕೃತಿ ಹಾಗೂ ಕೃಷಿ ಪರಂಪರೆಯ ನೈಜ ಪರಿಚಯ ವಿಶೇಷ ಅನುಭವ ನೀಡಿದೆ’ ಎಂದು ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಅಭಿಪ್ರಾಯಪಟ್ಟರು.

ದೊಡ್ಡಬ್ಯಾಲಕೆರೆಯ ಯೂರೋಕಿಡ್ಸ್ ಪ್ರೀ ಸ್ಕೂಲ್ನಲ್ಲಿ ಈಚೆಗೆ ಆಯೋಜಿಸಿದ್ದ ಸಂಕ್ರಾಂತಿ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಶಾಲೆಯ ಆವರಣದಲ್ಲಿ ಗ್ರಾಮೀಣ ವಾತಾವರಣ ನಿರ್ಮಿಸಿರುವುದು ಬಾಲ್ಯದ ಹಳ್ಳಿ ಬದುಕು ನೆನಪಿಸಿತು’ ಎಂದರು.

‘ಕಾಲಾನುಸಾರ ಜಾನಪದ ಬದುಕಿನ ಮಜಲು ಮತ್ತು ಗ್ರಾಮೀಣ ಆಚರಣೆಗಳು ಮಾಯವಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ‘ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ನಮ್ಮ ನೆಲಮೂಲ ಆಚರಣೆಗಳ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದರು.

ಇದೇ ವೇಳೆ ಶಾಲೆಯ ಮಕ್ಕಳು ಜನಪದ ನೃತ್ಯ ಪ್ರದರ್ಶಿಸಿದರು. ಜನಪದ ಗೀತೆಗಳ ಮೂಲಕ ಅಪ್ಪಗೆರೆ ತಿಮ್ಮರಾಜು ರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.