ಪೀಣ್ಯ ದಾಸರಹಳ್ಳಿ: ‘ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕ. ಅದು ನಮ್ಮ ಬದುಕಿಗೆ ನೀತಿ ಪಾಠಗಳನ್ನು ಕಲಿಸುತ್ತದೆ’ ಎಂದು ಕನ್ನಡಪರ ಚಿಂತಕ ಚಿಕ್ಕಹೆಜ್ಜಾಜಿ ಮಹದೇವ್ ತಿಳಿಸಿದರು.

ಕನ್ನಡ ಜಾನಪದ ಪರಿಷತ್ಗೆ ಹತ್ತು ವರ್ಷ ತುಂಬಿದ ಪ್ರಯುಕ್ತ ದಾಸರಹಳ್ಳಿ ಕ್ಷೇತ್ರ ಘಟಕದ ವತಿಯಿಂದ ಹೆಸರಘಟ್ಟ ಮುಖ್ಯರಸ್ತೆಯ ಅಸೆಂಟ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ‘ದಶಮಾನೋತ್ಸವ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಎಸ್. ಮುನಿರಾಜು ಮಾತನಾಡಿ, ‘ನಮ್ಮ ಬಾಲ್ಯದಲ್ಲಿ ಜಾನಪದ ಹಾಡು, ನೃತ್ಯ, ಕ್ರೀಡೆ ಎಲ್ಲವೂ ಇದ್ದವು. ಇವೆಲ್ಲದರ ಜೊತೆಗೆ ನಮ್ಮ ಬದುಕು ಸಮೃದ್ಧವಾಗಿತ್ತು. ಅಂತಹ ಸಮೃದ್ಧ ಜಾನಪದ ಸಂಸ್ಕೃತಿಯನ್ನು ನಾವಿಂದು ಉಳಿಸಬೇಕಿದೆ’ ಎಂದರು.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್ ಬಾಲಾಜಿ ಮಾತನಾಡಿ, ‘ಜಾನಪದ ಎಂಬುದು ವಿಶಾಲವಾದ ಆಲದ ಮರ. ಅದರ ಸಮೃದ್ಧ ನೆರಳಲ್ಲಿ ನಾವು ಬದುಕುವಂತಾಗಬೇಕು. ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ತಿಳಿಸಿದರು.

ಸಮಾರಂಭದಲ್ಲಿ 10 ಸಾಧಕರಿಗೆ ದಶಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ, ಹಾಡು ಮನರಂಜನಾ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.