ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೆಸ್ಟೀಜ್ ಗ್ರೂಪ್‌: ಆಹಾರ ವಿತರಣೆ

Last Updated 1 ಏಪ್ರಿಲ್ 2020, 20:43 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸಮಸ್ಯೆ ಎದುರಿಸುತ್ತಿರುವ ದಿನಗೂಲಿ ನೌಕರರು, ನಿರಾಶ್ರಿತರು ಹಾಗೂ ಅನಾಥ ಮಕ್ಕಳು ಸೇರಿ 10 ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರೆಸ್ಟೀಜ್ ಸಮೂಹ ಸಂಸ್ಥೆಯ ವತಿಯಿಂದ ನಿತ್ಯ ಆಹಾರ ವಿತರಿಸಲಾಗುತ್ತಿದೆ.

ಕಾರ್ಮಿಕರ ಕ್ಯಾಂಪ್‍ಗಳ ಬಳಿ ತೆರಳಿ ಆಹಾರ ವಿತರಿಸಲಾಗುತ್ತಿದೆ. ಜನರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರು ಮಾತ್ರವಲ್ಲದೆ ಇಡೀ ದೇಶಕ್ಕೆ ಅನ್ವಯವಾಗುವಂತೆ ಸಹಾಯವಾಣಿ ಆರಂಭಿಸಿದೆ.

ಪ್ರೆಸ್ಟೀಜ್ ಸಮೂಹ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿದೇಶಕ ಇರ್ಫಾನ್ ರಜಾಕ್, ‘ಕೊರೊನಾ ಲಾಕ್‍ಡೌನ್‍ನಿಂದ ದಿನಗೂಲಿ ನೌಕರರ ಸ್ಥಿತಿ ಅಸ್ತವ್ಯಸ್ತವಾಗಿದೆ. ಇದರಿಂದ ಅಸಂಘಟಿತ ಕಾರ್ಮಿಕರು ತಮ್ಮ ದೈನಂದಿನ ಆದಾಯದಿಂದ ವಂಚಿತರಾಗಿ, ಆಹಾರದ ಸಮಸ್ಯೆಯಿಂದ ತತ್ತರಿಸುತ್ತಿದ್ದಾರೆ. ಇವರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಸಂಸ್ಥೆ ಮುಂದಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT