ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಫುಡ್‌ ಫೆಸ್ಟ್‌ ಇದೇ 16ರಿಂದ

Published 14 ಮಾರ್ಚ್ 2024, 15:30 IST
Last Updated 14 ಮಾರ್ಚ್ 2024, 15:30 IST
ಅಕ್ಷರ ಗಾತ್ರ

ಬೆಂಗಳೂರು: ಲಘು ಉದ್ಯೋಗ ಭಾರತಿ, ಐಎಂಎಸ್ ಫೌಂಡೇಷನ್ ಹಾಗೂ ಬಿಗ್‌ ಫೌಂಡೇಷನ್ ಸಹಯೋಗದಲ್ಲಿ ಇದೇ 16 ಮತ್ತು 17ರಂದು ‘ಫುಡ್‌ಫೆಸ್ಟ್‌–ಎಕ್ಸ್‌ಪೀರಿಯನ್ಸ್‌ ಮಿಲ್ಲೆಟ್ಸ್‌’ ಕಾರ್ಯಕ್ರಮವನ್ನು ಬಸವನಗುಡಿಯ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಘು ಉದ್ಯೋಗ ಭಾರತಿಯ ಜಂಟಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ‘ಫುಡ್‌ಫೆಸ್ಟ್‌ನಲ್ಲಿ ರಾಗಿ, ಜೋಳ, ನವಣೆ, ಸಾಮೆ ಸೇರಿದಂತೆ ವಿವಿಧ ಸಿರಿಧಾನ್ಯಗಳಾಧಾರಿತ 100ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ’ ಎಂದರು.

‘ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳ ಉತ್ಪನ್ನಗಳು, ಮಾರುಕಟ್ಟೆ ಮತ್ತು ಬೇಡಿಕೆ ವಿಶ್ಲೇಷಣೆ, ಪೂರೈಕೆ, ಲಾಜಿಸ್ಟಿಕ್ಸ್‌ ಮತ್ತು ಗುಣಮಟ್ಟದ ಹಣಕಾಸು ಮತ್ತು ವ್ಯವಹಾರ ಬೆಂಬಲ, ನೆಟ್‌ವರ್ಕಿಂಗ್‌ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಮೇಳದಲ್ಲಿ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

’ನಿತ್ಯದ ಅಡುಗೆಯಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ‘ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಲಘು ಉದ್ಯೋಗ ಭಾರತಿಯ ಕಾರ್ಯದರ್ಶಿಗಳಾದ ಹೇಮಾ ರಾಜೇಶ್, ಛಾಯಾ ಪ್ರಭು, ಸಿ.ಎನ್. ಭೋಜರಾಜ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT