ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಚಿಂದಿ ಆಯುವ ವ್ಯಕ್ತಿ ಕೈಗೆ ಸಿಕ್ಕಿದ ನಕಲಿ ವಿದೇಶಿ ಕರೆನ್ಸಿ

Published 8 ನವೆಂಬರ್ 2023, 21:30 IST
Last Updated 8 ನವೆಂಬರ್ 2023, 21:30 IST
ಅಕ್ಷರ ಗಾತ್ರ

ಬೆಂಗಳೂರು: ಚಿಂದಿ ಆಯುವ ವ್ಯಕ್ತಿಯೊಬ್ಬರಿಗೆ ಅಮೆರಿಕದ ಕರೆನ್ಸಿ ಸಿಕ್ಕಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಅದನ್ನು ಪರಿಶೀಲಿಸಿದಾಗ ಅವುಗಳು ನಕಲಿ ಕರೆನ್ಸಿಗಳು ಎಂಬುದು ಗೊತ್ತಾಗಿದೆ.

‘₹30 ಲಕ್ಷ ಮೌಲ್ಯದ ಅಮೆರಿಕನ್‌ ಡಾಲರ್‌ ಸಿಕ್ಕಿದೆ ಎಂದು ಕರೆ ಮಾಡಿ ತಿಳಿಸಲಾಗಿತ್ತು. ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಆದರೂ ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪಶ್ಚಿಮ ಬಂಗಾಳದ ಸುಲೇಮಾನ್ ಶೇಕ್‌(39) ಅವರು ಹೆಬ್ಬಾಳ, ನಾಗವಾರ ಸುತ್ತಮುತ್ತ ತ್ಯಾಜ್ಯ ಆಯ್ದು ಜೀವನ ನಡೆಸುತ್ತಿದ್ದಾರೆ. ನ.3ರಂದು ವೀರಣ್ಯಾಪಾಳ್ಯದ ರೈಲ್ವೆ ಗೇಟ್ ಬಳಿ ಕಪ್ಪು ಬಣ್ಣದ ಚೀಲವೊಂದು ಅವರಿಗೆ ಸಿಕ್ಕಿದೆ. ಆ ಚೀಲದಲ್ಲಿ ಈ ಕರೆನ್ಸಿ‌ಗಳು ಪತ್ತೆಯಾಗಿವೆ. ಅದರ ಬಗ್ಗೆ ತಿಳಿಯದ ಸುಲೇಮಾನ್ ಶೇಕ್, ತನಗೆ ಆಶ್ರಯ ನೀಡಿದ್ದ ಟೇಕೆದಾಸ್‌ ಎಂಬುವರಿಗೆ ಮಾಹಿತಿ ನೀಡಿದ್ದರು. ಬಳಿಕ ಟೇಕೆದಾಸ್ ಆ ಚೀಲ ಪರಿಶೀಲಿಸಿದರು. ಸ್ಥಳೀಯರಾದ ಆರ್.ಕಲೀಂ ಉಲ್ಲಾಗೂ ಮಾಹಿತಿ ನೀಡಿದ್ದರು. ಕರೀಂ ಅವರು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದರು. ಕೂಡಲೇ ನೋಟುಗಳ ಬಗ್ಗೆ ಪರಿಶೀಲಿಸುವಂತೆ ಹೆಬ್ಬಾಳ ಪೊಲೀಸರಿಗೆ ಸೂಚಿಸಿದ್ದರು. ಬಳಿಕ ಹೆಬ್ಬಾಳ ಪೊಲೀಸರು ಪರಿಶೀಲನೆ ನಡೆಸಿದ್ದರು.

‘ಸಿಕ್ಕಿದ ಕರೆನ್ಸಿಯನ್ನು ಪರಿಶೀಲಿಸಲಾಗಿದೆ. ಇದು ಮೇಲ್ನೋಟಕ್ಕೆ ಕಲರ್‌ ಜೆರಾಕ್ಸ್‌ ರೀತಿ ಕಾಣಿಸುತ್ತಿವೆ. ಅವುಗಳ ನೈಜತೆ ಪರೀಕ್ಷೆಗಾಗಿ ಆರ್‌ಬಿಐಗೆ ರವಾನೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT