ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬೆಂಗಳೂರಿನಲ್ಲಿ ಬೀದಿ ಬದಿ ಆಹಾರ ಸವಿದು ಗಮನ ಸೆಳೆದಿದ್ದಾರೆ.

ಸಚಿವ ಅಶ್ವತ್ಥ್ ನಾರಾಯಣ ಜೊತೆ ನಗರದ ವಿವಿ ಪುರದ ಸಜ್ಜನ್ ರಾವ್ ಸರ್ಕಲ್‌ಗೆತೆರಳಿ ಅಲ್ಲಿನ ಜನಪ್ರಿಯ ಬೀದಿ ಬದಿಯ ಆಹಾರ ಸವಿದರು. ಅವರು ಚಾಟ್ ಮಸಾಲಾ, ಗೋಬಿ ಹಾಗೂ ಪಾವ್ ಬಾಜಿ ಸವಿದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಜೈಶಂಕರ್ ಅವರು, ‘ಬೆಂಗಳೂರಿನ ಭೇಟಿ ನಿಮಿತ್ತ ಅಲ್ಲಿನ ಜನಪ್ರಿಯಬೀದಿ ಬದಿ ಆಹಾರ ಸವಿದೆ. ರುಚಿ ಎನ್ನುವುದಕ್ಕೆ ಬೆಂಗಳೂರಿನ ತಿಂಡಿಗಳು ನಿಜವಾದ ಸತ್ಕಾರ ನೀಡಿದಂತಾಯಿತು. ಬೆಂಗಳೂರು ಪಾಕಶಾಲೆ ಇತಿಹಾಸದ ಉಗ್ರಾಣವಾಗಿದೆ’ ಎಂದು ಮೆಚ್ಚಿಕೊಂಡಿದ್ದಾರೆ.

ಇದೇ ವೇಳೆ ಜನಪ್ರಿಯ ಫುಡ್ ಬ್ಲಾಗರ್ ಆದ ಕೃಪಾಲ್ ಅಮಣ್ಣ ಅವರು ಕೂಡ ಹಾಜರಿದ್ದು ವಿವಿ ಪುರಂನ ಜನಪ್ರಿಯ ತಿಂಡಿಗಳನ್ನು ಸಚಿವರಿಗೆ ಪರಿಚಯಿಸಿಕೊಟ್ಟರು.

ಕಾಫಿ ನಾಡು ಚಂದು ‘ಬಿಗ್ಬಾಸ್‘ ಮನೆಗೆ ಹೋಗಬೇಕು: ಅಭಿಯಾನ ಶುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.