ಗುರುವಾರ , ಆಗಸ್ಟ್ 6, 2020
25 °C
ವಿಶ್ವವಿದ್ಯಾಲಯಗಳಲ್ಲಿ ಗುಣಾತ್ಮಕ ಶಿಕ್ಷಣ ಸಾಧನೆಗೆ ಸಲಹೆ

‘ಸೃಜನಶೀಲತೆ ಜೊತೆ ಮಾನವೀಯತೆ ಬೆಳೆಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಬಿಕ್ಕಟ್ಟಿನ ನಂತರ, ಶಿಕ್ಷಣ ವ್ಯವಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುವ ಕುರಿತು ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದು, ಸೃಜನಶೀಲತೆ ಜೊತೆಗೆ ಮಾನವೀಯ ಮೌಲ್ಯಗಳ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದೆ. 

ವಿದ್ಯಾರ್ಥಿಯು ತಾನು ಕಲಿಯುತ್ತಿರುವ ವಿಷಯದಲ್ಲಿ ಶ್ರೇಷ್ಠಮಟ್ಟದ ಜ್ಞಾನ ಪಡೆಯುವುದರ ಜೊತೆಗೆ, ವಿಷಯ ವಿಶ್ಲೇಷಣೆಯಲ್ಲಿ ಸೃಜನಶೀಲತೆ ಪಡೆಯಬೇಕು, ಜೊತೆಗೆ ಅತ್ಯುತ್ತಮ ಸಂವಹನ ಕೌಶಲ ಪಡೆಯುವಂತಹ ಶಿಕ್ಷಣ ನೀಡಬೇಕು. ಮುಖ್ಯವಾಗಿ, ಪರಸ್ಪರರ ನಡುವೆ ಸೌಹಾರ್ದ ಸಂಬಂಧ ಪಡೆಯುವ ಮನೋಧರ್ಮ ಬೆಳೆಸುವ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಹೃದಯ ವೈಶಾಲ್ಯ ಮೂಡಿಸುವ ಶಿಕ್ಷಣ ನೀಡುವಂತಾಗಬೇಕು ಎಂದು ವೇದಿಕೆ ಹೇಳಿದೆ. 

‘ಪಠ್ಯಕ್ರಮದ ಆಯ್ಕೆಯನ್ನು ಆಯಾ ವಿಶ್ವವಿದ್ಯಾಲಯಗಳ ಆಯ್ಕೆಗೇ ಬಿಡಬೇಕು, ಉಳಿದ ಆದ್ಯತೆಗಳ ಕಡೆಗೆ ಸರ್ಕಾರವು ಗಮನಹರಿಸಿ, ಗುಣಮಟ್ಟದ ಉನ್ನತ ಶಿಕ್ಷಣ ನೀಡಲು ಮುಂದಾಗಬೇಕು’ ಎಂದು ವೇದಿಕೆಯ ಕಾರ್ಯದರ್ಶಿ ಡಾ.ಆರ್.ಎನ್. ಶ್ರೀನಿವಾಸಗೌಡ ಹೇಳಿದ್ದಾರೆ. 

‘ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ಅಥವಾ ಬೋಧಕ ವರ್ಗದ ಕೊರತೆ ಇದೆ. ಮೂಲಸೌಕರ್ಯ ಅಭಿವೃದ್ಧಿಯಾಗಬೇಕಿದೆ. ನಿರ್ವಹಣೆಯ ಮಟ್ಟವೂ ಸುಧಾರಿಸಬೇಕಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು