ಬೆಂಗಳೂರು: ಗಿರಿನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಘವೇಶ್ವರಭಾರತೀ ಸ್ವಾಮೀಜಿಯವರ ‘ತತ್ತ್ವಭಾಗವತಮ್' ಪ್ರವಚನಗಳನ್ನಾಧರಿಸಿದ 'ಪಿಬತ ಭಾಗವತಮ್', 'ನಲ ದಮಯಂತಿ', 'ಕಲಿ ಸಂತರಣ' ಹಾಗೂ 'ಅವತಾರಕಥಾ' ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರಾಘವೇಶ್ವರಭಾರತೀ ಸ್ವಾಮೀಜಿ, ಪುಸ್ತಕಗಳ ಸಂಪಾದಕರಾದ ಪಾದೇಕಲ್ಲು ವಿಷ್ಣು ಭಟ್ ಮತ್ತು ಅನೂರಾಧಾ ಪಾರ್ವತೀ ಅವರು ಭಾಗವಹಿಸಿದ್ದರು.

‘ಪಿಬತ ಭಾಗವತಮ್’ ಕೃತಿಯಲ್ಲಿ ಭಾರವಿ, ಮಲ್ಲಿನಾಥ ಸೂರಿ, ವಾಚಸ್ಪತಿ ಮಿಶ್ರ, ಪಾಣಿನಿ, ಮೀರ ಇವರ ಅದ್ಭುತ ಕಥೆಗಳಿವೆ. ‘ಕಲ್ಲಿಸಂತರಣ’ ಕೃತಿಯಲ್ಲಿ ಪಂಚಪಾಂಡವರ ನಿರ್ಯಾಣದ ಕಥನ, ಕಲಿಯ ಪ್ರವೇಶ, ಪರೀಕ್ಷಿತಮೋಕ್ಷ ಇವೆಲ್ಲದರ ಚಿತ್ರಣವಿದೆ. ‘ನಲ ದಮಯಂತಿ’ ಕೃತಿಯಲ್ಲಿ ರಾಮ ಸೀತೆಯರಿಗೆ ಆದರ್ಶವಾದ ನಲ ದಮಯಂತಿಯರ ಅದ್ಭುತ ಕಥನವಿದೆ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ ಇವರ ಕಥಾನಕಗಳು ಅವತಾರ ಈ ಕೃತಿಯಲ್ಲಿವೆ.

ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ.ಎಲ್., ಶ್ರೀಭಾರತೀ ಪ್ರಕಾಶನದ ಅಧ್ಯಕ್ಷ ಸಚಿನ್ ಎಲ್. ಎಸ್., ಹಿರಿಯ ಉಪಾಧ್ಯಕ್ಷ ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್, ಧರ್ಮಭಾರತೀ ಸಂಪಾದಕ ಗಣೇಶ್ ಕೃಷ್ಣ ಹೆಗಡೆ ಹಾಗೂ ಪ್ರಕಾಶನ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಪುಸ್ತಕಗಳಿಗಾಗಿ ಶ್ರೀಪುಸ್ತಕಮ್ - 9591542454 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.