ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲರ್‌ ಆಮಿಷ: ₹45 ಲಕ್ಷ ವಂಚನೆ

Last Updated 18 ಜನವರಿ 2020, 22:17 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕನ್ ಡಾಲರ್ ನೀಡುವುದಾಗಿ ಆಮಿಷವೊಡ್ಡಿದ್ದ ಮೊಲ್ಟೆ ರಾಬರ್ಟ್ ಎಂಬಾತ ನಗರದ ನಿವಾಸಿಟಿ.ಎಂ.ಥಾಮಸ್ ಎಂಬುವರಿಂದ ₹45 ಲಕ್ಷ ಪಡೆದು ಪರಾರಿಯಾಗಿರುವ ಬಗ್ಗೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಇದೇ 16ರಂದು ನಡೆದಿರುವ ವಂಚನೆ ಸಂಬಂಧ ಥಾಮಸ್ ಅವರೇ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಮೊಲ್ಟೆ ರಾಬರ್ಟ್ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘1 ಡಾಲರ್‌ನ ರೂಪಾಯಿ ಮೌಲ್ಯ ಸದ್ಯ ₹71.04 ಇದೆ. ₹ 60 ಕೊಟ್ಟರೆ ಒಂದು ಡಾಲರ್‌ ನೀಡುವುದಾಗಿ ಹೇಳಿಮೊಲ್ಟೆ ರಾಬರ್ಟ್ ವಂಚಿಸಿದ್ದಾನೆ’ ಎಂದರು.

‘ದೂರುದಾರ ಥಾಮಸ್ ಅವರಿಗೆ ಸ್ನೇಹಿತರೊಬ್ಬರು ಡಾಲರ್ ಬಗ್ಗೆ ತಿಳಿಸಿದ್ದರು. ಆ ಬಗ್ಗೆ ಮಾತನಾಡಲೆಂದು ಸಹೋದರನ ಜೊತೆ ಗರುಡಾ ಮಾಲ್‌ನಲ್ಲಿರುವ ಹೋಟೆಲ್‌ಗೆ ಹೋಗಿದ್ದರು. ಅಲ್ಲಿಯೇ ಆರೋಪಿ ರಾಬರ್ಟ್ ₹ 45 ಲಕ್ಷ ನಗದು ಪಡೆದಿದ್ದ. ಮನೆಗೆ ತೆರಳಿ ಅಮೆರಿಕನ್‌ ಡಾಲರ್‌ ತರುವುದಾಗಿ ಹೇಳಿ ಹಣದ ಸಮೇತ ಸ್ಥಳದಿಂದ ಹೊರಟು ಹೋಗಿದ್ದಾನೆ. ವಾಪಸು ಬಂದಿಲ್ಲ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT