ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಚಾರಿ ನೇತ್ರ ಚಿಕಿತ್ಸಾ ವಾಹನ ದೇಣಿಗೆ

Published 5 ಆಗಸ್ಟ್ 2024, 15:39 IST
Last Updated 5 ಆಗಸ್ಟ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ಆಲ್ಕಾನ್‌ ಇಂಡಿಯಾ ಸಂಸ್ಥೆಯು ಕೊಳೆಗೇರಿ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ಕಣ್ಣಿನ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಸಂಚಾರಿ ಕಣ್ಣಿನ ಆರೈಕೆ ವಾಹನವನ್ನು ಸೈಟ್‌ಸೇವರ್ಸ್‌ ಇಂಡಿಯಾ ಸಂಸ್ಥೆಗೆ ದೇಣಿಗೆಯಾಗಿ ನೀಡಿದೆ.

ಜಯನಗರದ ಬೆಂಗಳೂರು ಮಧುಮೇಹ ಮತ್ತು ಕಣ್ಣಿನ ಆಸ್ಪತ್ರೆಯಲ್ಲಿ ಸೋಮವಾರ ವಾಹನ ಹಸ್ತಾಂತರ ಕಾರ್ಯಕ್ರಮ ನಡೆಯಿತು.

‘ಆಲ್ಕಾನ್‌ ಇಂಡಿಯಾದ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಯೋಜನೆಯ ಭಾಗವಾಗಿ ಈ ವಾಹನವನ್ನು ದೇಣಿಗೆಯಾಗಿ ನೀಡಲಾಗಿದೆ. ಬೆಂಗಳೂರು ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಏಳು ಸಾವಿರ ಜನರಿಗೆ ಉತ್ತಮ ಗುಣಮಟ್ಟದ ಕಣ್ಣಿನ ಆರೈಕೆ ನೀಡುವುದೇ ಸಂಸ್ಥೆಯ ಉದ್ದೇಶ’ ಎಂದು ಸಂಸ್ಥೆಯ ಮುಖ್ಯಸ್ಥ ಅಮರ್ ವ್ಯಾಸ್‌ ಹೇಳಿದರು.

‘ಸಂಚಾರಿ ವಾಹನದಲ್ಲಿ ಅತ್ಯಾಧುನಿಕ ಕಣ್ಣಿನ ಸಮಗ್ರ ಪರೀಕ್ಷೆ ನಡೆಯಲಿದೆ. ದೃಷ್ಟಿ ದೋಷಗಳನ್ನು ಪತ್ತೆ ಮಾಡುವುದರ ಜೊತೆಗೆ ಸಾಮಾನ್ಯ ಕಣ್ಣಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಸಮಸ್ಯೆಗಳಿದ್ದಲ್ಲಿ ಚಿಕಿತ್ಸೆಗೆ ರೋಗಿಗಳನ್ನು ಶ್ರದ್ಧಾ ಐ ಕ್ಲಿನಿಕ್ ಟ್ರಸ್ಟ್‌ಗೆ ಶಿಫಾರಸು ಮಾಡಲಾಗುತ್ತದೆ. ಅಲ್ಲಿ ರೋಗಿಯ ಸಾಮಾಜಿಕ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಉಚಿತ ಚಿಕಿತ್ಸೆ ಅಥವಾ ಸಹಾಯಧನ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಎಚ್‌ಎಸ್‌ಆರ್ ಲೇಔಟ್, ಮಡಿವಾಳ, ಕೋರಮಂಗಲ, ಕುಮಾರಸ್ವಾಮಿ ಲೇಔಟ್ ಮತ್ತು ಜಯನಗರ, ಅಬ್ಬಿಗೆರೆ, ಅಮೃತಹಳ್ಳಿ, ದಾಸರಹಳ್ಳಿ, ಯಲಹಂಕ, ಹೆಬ್ಬಾಳ, ಆವಲಹಳ್ಳಿ, ದೊಮ್ಮಸಂದ್ರ, ಬಿದರಹಳ್ಳಿ, ಬಸವೇಶ್ವರನಗರ, ಚಂದ್ರಾ ಲೇಔಟ್, ಕೆಂಗೇರಿ, ಮಹಾಲಕ್ಷ್ಮಿ ಲೇಔಟ್, ಮತ್ತಿಕೆರೆ ಪ್ರದೇಶದಲ್ಲಿ ಸಂಚರಿಸಿ ಸೇವೆ ನೀಡಲಿದೆ’ ಎಂದರು.

ಸೈಟ್‌ಸೇವರ್ಸ್ ಇಂಡಿಯಾದ ಸಿಇಓ ಆರ್‌.ಎನ್. ಮೊಹಾಂತಿ, ಶ್ರದ್ಧಾ ಐ ಕೇರ್ ಟ್ರಸ್ಟ್‌ನ ಡಾ. ಗಣೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT