ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರ 83 ಸಾವಿರ ಗಣೇಶ ಮೂರ್ತಿ ವಿಸರ್ಜನೆ

Published : 9 ಸೆಪ್ಟೆಂಬರ್ 2024, 20:40 IST
Last Updated : 9 ಸೆಪ್ಟೆಂಬರ್ 2024, 20:40 IST
ಫಾಲೋ ಮಾಡಿ
Comments

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರ (ಸೆಪ್ಟೆಂಬರ್‌ 8) 83,404 ಗಣೇಶ ಮೂರ್ತಿಗಳನ್ನು
ವಿಸರ್ಜಿಸಲಾಗಿದೆ.

ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವ‌ತ/ ತಾತ್ಕಾಲಿಕ ಕಲ್ಯಾಣಿಗಳಲ್ಲಿ ಮೂರ್ತಿಗಳನ್ನು
ವಿಸರ್ಜಿಸಲಾಗಿದೆ. ದಕ್ಷಿಣ ವಲಯದಲ್ಲಿ ಅತಿಹೆಚ್ಚು (47,055) ಮೂರ್ತಿಗಳು ವಿಸರ್ಜನೆಯಾಗಿವೆ. ಪೂರ್ವ ವಲಯದಲ್ಲಿ 12,652, ಪಶ್ಚಿಮದಲ್ಲಿ 10,828, ಬೊಮ್ಮನಹಳ್ಳಿಯಲ್ಲಿ 2,276, ಯಲಹಂಕದಲ್ಲಿ 4096, ಆರ್.ಆರ್.ನಗರದಲ್ಲಿ 3,859, ಮಹದೇವಪುರದಲ್ಲಿ 2,224 ಹಾಗೂ ದಾಸರಹಳ್ಳಿ ವಲಯದಲ್ಲಿ 424 ಮೂರ್ತಿಗಳು ವಿಸ ರ್ಜನೆಯಾಗಿವೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಸ್ವಚ್ಛತಾ ಕಾರ್ಯ: ಯಡಿಯೂರು ಕೆರೆಯ ಕಲ್ಯಾಣಿಯಲ್ಲಿ ಮಂಗಳವಾರ ಸ್ವಚ್ಛತಾ ಕಾರ್ಯ ಕೈಗೊಂಡಿರುವುದರಿಂದ ‌ಗಣೇಶ ವಿಸರ್ಜನೆಯನ್ನು ನಿರ್ಬಂಧಿಸಲಾಗಿದೆ. ಸೆ.11ರಿಂದ (ಬುಧವಾರ) 17ರವರೆಗೆ ಮೂರ್ತಿ ವಿಸರ್ಜನೆಗೆ ಅವಕಾಶ ಇರುತ್ತದೆ ಎಂದು ಪದ್ಮನಾಭನಗರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT