ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಮವಾರದಂದು (ಸೆಪ್ಟಂಬರ್ 9) 1.32 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.
ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವತ/ ತಾತ್ಕಾಲಿಕ ಕಲ್ಯಾಣಿಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.
ದಕ್ಷಿಣ ವಲಯದಲ್ಲಿ 62,246, ಪೂರ್ವದಲ್ಲಿ 29,586, ಪಶ್ಚಿಮದಲ್ಲಿ 15,516, ಯಲಹಂಕದಲ್ಲಿ 8,732, ಆರ್.ಆರ್.ನಗರದಲ್ಲಿ 6,716, ಮಹದೇವಪುರದಲ್ಲಿ 4,899, ಬೊಮ್ಮನಹಳ್ಳಿಯಲ್ಲಿ 3,790 ಹಾಗೂ ದಾಸರಹಳ್ಳಿ ವಲಯದಲ್ಲಿ 668 ಮೂರ್ತಿಗಳು ವಿಸರ್ಜನೆಯಾಗಿವೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.