ಬೆಂಗಳೂರು: ಯಲಹಂಕ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸ್ಟ್ 31ರಂದು ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿರುವ ಕಾರಣ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಗಣೇಶ ಮೂರ್ತಿಗಳ ವಿಸರ್ಜನೆಗೂ ಮುನ್ನ ನಡೆಯುವ ಮೆರವಣಿಗೆಯು ಯಲಹಂಕ ನ್ಯೂಟೌನ್, ಸಿಂಗಾಪುರ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ ಮತ್ತು ವಿದ್ಯಾರಣ್ಯಪುರ ಪ್ರದೇಶಗಳಲ್ಲಿ ಸಾಗಲಿದೆ. ಹಾಗಾಗಿ ಬೆಳಿಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಿಸಿ, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.

ಸಿಂಗಾಪುರ ಲೇಔಟ್ನಿಂದ ದೊಡ್ಡಬೊಮ್ಮಸಂದ್ರ ಕೆರೆಯವರೆಗೆ ಹಾಗೂ ಸಂಭ್ರಮ್ ಕಾಲೇಜು ಆರ್ಚ್ನಿಂದ ಅಲ್ಲಾಳಸಂದ್ರ ಕೆರೆಯವರೆಗೆ ಮೆರವಣಿಗೆ ನಡೆಯಲಿದೆ.

ವಾಹನ ಸಂಚಾರ ನಿರ್ಬಂಧ?: ಜಾಲಹಳ್ಳಿ, ಪೀಣ್ಯ, ಯಶವಂತಪುರ, ವಿಜಯನಗರ, ಕೆಂಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಯಲಹಂಕಕ್ಕೆ ಬರುವ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ಎಂ.ಎಸ್. ಪಾಳ್ಯ ಜೆಲ್ಲಿ ಮಿಷನ್ ಕ್ರಾಸ್, ಜಿಕೆವಿಕೆ ಬ್ಯಾಕ್ ಗೇಟ್, ತಿರುಮಲ ಢಾಬಾ, ಅಟ್ಟೂರು ಜಂಕ್ಷನ್, ಮದರ್ ಡೇರಿ ಜಂಕ್ಷನ್ ಕಡೆಗೆ ಹೋಗುವ ವಾಹನಗಳಿಗೆ ಬೆಳಿಗ್ಗೆ 9ರಿಂದ ರಾತ್ರಿ 10ರವರೆಗೆ ನಿರ್ಬಂಧ ಇದೆ.

ಪರ್ಯಾಯ ಮಾರ್ಗ: ಜಾಲಹಳ್ಳಿ ಮತ್ತು ಪೀಣ್ಯದಿಂದ ಯಲಹಂಕ ಕಡೆಗೆ ಹೋಗುವ ವಾಹನಗಳು ಗಂಗಮ್ಮ ವೃತ್ತದಲ್ಲಿ ಬಲಕ್ಕೆ ತಿರುಗಬೇಕು. ನಂತರ ಬಿಇಎಲ್ ವೃತ್ತದಲ್ಲಿ ಎಡಕ್ಕೆ ತಿರುಗಿ, ದೊಡ್ಡಬೊಮ್ಮಸಂದ್ರ ಕಮಾನು, ನಂಜಪ್ಪ ವೃತ್ತ, ತಿಂಡ್ಲು ಮುಖ್ಯರಸ್ತೆ ಮೂಲಕ ಜಿಕೆವಿಕೆ ಡಬಲ್ ರಸ್ತೆಯಲ್ಲಿ ಎಡ ತಿರುವು ಪಡೆದು ಜಿಕೆವಿಕೆ ಹಿಂಭಾಗದ ಗೇಟ್ನಿಂದ ಉನ್ನಿಕೃಷ್ಣನ್ ಮುಖ್ಯ ರಸ್ತೆಯ ಮೂಲಕ ಯಲಹಂಕ ತಲುಪಬಹುದು.

ಯಶವಂತಪುರ, ವಿಜಯನಗರ ಮತ್ತು ಕೆಂಗೇರಿಯಿಂದ ಯಲಹಂಕ ಕಡೆಗೆ ಹೋಗುವ ವಾಹನಗಳು ಬಿಇಎಲ್ ವೃತ್ತದಲ್ಲಿ ಬಲಕ್ಕೆ ತಿರುಗಬೇಕು. ದೊಡ್ಡಬೊಮ್ಮಸಂದ್ರ ಕಮಾನು, ನಂಜಪ್ಪ ವೃತ್ತ, ತಿಂಡ್ಲು ಮುಖ್ಯ ರಸ್ತೆ, ಜಿಕೆವಿಕೆ ಡಬಲ್ ರಸ್ತೆಯಲ್ಲಿ ಎಡ ತಿರುವು ಪಡೆದು ಜಿಕೆವಿಕೆ ಹಿಂಭಾಗದ ಗೇಟ್ನಿಂದ ಉನ್ನಿಕೃಷ್ಣನ್ ಮುಖ್ಯರಸ್ತೆಯ ಮೂಲಕ ಯಲಹಂಕ ತಲುಪಬಹುದು.

ಯಲಹಂಕದಿಂದ ಯಶವಂತಪುರ, ವಿಜಯನಗರ, ಕೆಂಗೇರಿ, ಜಾಲಹಳ್ಳಿ ಮತ್ತು ಪೀಣ್ಯ ಕಡೆಗೆ ಹೋಗುವ ವಾಹನಗಳು ಜಿಕೆವಿಕೆ ಹಿಂಭಾಗದ ಗೇಟ್ನಿಂದ ಜಿಕೆವಿಕೆ ಡಬಲ್ ರಸ್ತೆ ತಿಂಡ್ಲು ಕ್ರಾಸ್ ಬಳಿ ಎಡ ತಿರುವು ಪಡೆಯಬೇಕು. ನಂತರ ನಂಜಪ್ಪ ವೃತ್ತದ ಮುಖ್ಯರಸ್ತೆ, ದೊಡ್ಡಬೊಮ್ಮಸಂದ್ರ ಕಮಾನು, ಬಿಇಎಲ್ ವೃತ್ತದ ಮೂಲಕ ಯಶವಂತಪುರ, ವಿಜಯನಗರ, ಕೆಂಗೇರಿ, ಜಾಲಹಳ್ಳಿ ಮತ್ತು ಪೀಣ್ಯ ತಲುಪಬಹುದು.

ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯು ಶಾಂತಿಯುತವಾಗಿ ನಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.