ಗಾಂಜಾ ಮಾರುತ್ತಿದ್ದ ನಾಲ್ವರ ಬಂಧನ
ಬೆಂಗಳೂರು: ನಾಗರಬಾವಿ ಎರಡನೇ ಹಂತದಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರು ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.
‘ವಿನೋದ್ಕುಮಾರ್, ರಂಜಿತ್, ಸಯ್ಯದ್ ಇಮ್ತಿಯಾಜ್ ಹಾಗೂ ಪವನ್ಕುಮಾರ್ ಬಂಧಿತರು. ಅವರಿಂದ 7 ಕೆ. ಜಿ 35 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನಾಗರಬಾವಿ ಎರಡನೇ ಹಂತದ ಕೊಟ್ಟಿಗೆಪಾಳ್ಯ–ಕೆಂಗೇರಿ ನಡುವಿನ ರಸ್ತೆಯಲ್ಲಿ ಮರಳು ಸಂಗ್ರಹ ಘಟಕವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದೇ ಸ್ಥಳಕ್ಕೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು, ಗಾಂಜಾ ಪೊಟ್ಟಣಗಳನ್ನು ಮಾರುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.