ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಒಂದೇ ಕುಟುಂಬದ 13 ಮಂದಿಗೆ ಗಾಯ

Last Updated 3 ಮಾರ್ಚ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರದಮರಿಯಪ್ಪನ ಪಾಳ್ಯದಲ್ಲಿ ಶುಕ್ರವಾರ ಬೆಳಿಗ್ಗೆ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿ ಒಂದೇ ಕುಟುಂಬದ 13 ಮಂದಿ ಗಾಯಗೊಂಡಿದ್ದಾರೆ.

ಅಮೀರ್ ಜಾನ್(52), ಅಜ್ಮಲ್(46), ನಜೀಮ್(42), ರಿಯಾನ್ (14), ನಸೀಮಾ (40), ಸಲ್ಮಾ (33), ರೇಷ್ಮಾ ಬಾನು (48), ಅದ್ನಾನ್ (12), ಫಯಾಜ್ (10), ಮೆಹರುನ್ನೀಸಾ (11), ಜೈನಬ್ (8) ಶಬನಾಜ್ (18) ಗಾಯಗೊಂಡವರು. ಅದರಲ್ಲಿ ನಾಲ್ವರಿಗೆ ಹೆಚ್ಚಿನ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮರಿಯಪ್ಪನಪಾಳ್ಯದ ಮುಖ್ಯರಸ್ತೆಯ 4ನೇ ಕ್ರಾಸ್‌ನ ಎರಡನೇ ಮಹಡಿಯಲ್ಲಿ ಅಜ್ಮಲ್‌ ಕುಟುಂಬವು ಬಾಡಿಗೆ ಮನೆಯೊಂದರಲ್ಲಿ ನೆಲೆಸಿತ್ತು. ಅಜ್ಮಲ್‌ ಮನೆಯಲ್ಲಿ ಕಾರ್ಯಕ್ರಮವಿದ್ದಕಾರಣ ನೆಂಟರು ಬಂದಿದ್ದರು. ಗುರುವಾರ ರಾತ್ರಿ ಕಾರ್ಯಕ್ರಮಕ್ಕೆ ಮನೆಯವರೇ ಸೇರಿಕೊಂಡು ಅಡುಗೆ ಮಾಡಿದ್ದರು. ಅಡುಗೆ ಮಾಡಿದ ಬಳಿಕ ಗ್ಯಾಸ್‌ ಸ್ಟೌ ಅನ್ನು ಆಫ್‌ ಮಾಡುವುದನ್ನು ಮರೆತಿದ್ದರು. ಶುಕ್ರವಾರ ಬೆಳಿಗ್ಗೆ ಗ್ಯಾಸ್ ಆನ್‌ ಮಾಡಲು ಮುಂದಾದ ವೇಳೆ ಸ್ಫೋಟ ಸಂಭವಿಸಿದೆ ಎಂದು ಸಿಲಿಂಡರ್‌ ಸ್ಫೋಟದಿಂದ ಗೋಡೆಗಳು ಹಾಗೂ ಮೆಟ್ಟಿಲುಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಹೊರಗೆ ಓಡಿಬಂದ ಜನರು:

ಈ ಘಟನೆ ಬೆಳಿಗ್ಗೆ 6.45ರ ಸುಮಾರಿಗೆ ನಡೆದಿದೆ.ಆ ವೇಳೆ ಅಜ್ಮಲ್‌ ಮನೆ ಹಾಗೂ ಅಕ್ಕಪಕ್ಕದ ಮನೆಯಲ್ಲಿ ಬಹು
ತೇಕರು ನಿದ್ರೆಯಲ್ಲಿದ್ದರು. ಸ್ಫೋಟದ ಶಬ್ದ ಕೇಳಿ ಕಟ್ಟಡದಿಂದ ಹೊರಗೆ ಓಡಿಬಂದು ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT