ಬುಧವಾರ, ಮೇ 27, 2020
27 °C

ಗ್ಯಾಸ್ ರಿಫಿಲ್ಲಿಂಗ್ ದಂಧೆ; 66 ಸಿಲಿಂಡರ್ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ರಿಫಿಲ್ಲಿಂಗ್ ದಂಧೆ ನಡೆಸುತ್ತಿದ್ದ ಅಂಗಡಿ ಮೇಲೆ ಅಶೋಕನಗರ ಪೊಲೀಸರು ದಾಳಿ ಮಾಡಿದ್ದು, 66 ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದಾರೆ.

‘ನೀಲಸಂದ್ರದ ನಿವಾಸಿ ಮೊಹ್ಮದ್ ಖಾಲಿದ್ ಎಂಬುವರು ತಮ್ಮ ಅಂಗಡಿಯಲ್ಲಿ ರಿಫಿಲ್ಲಿಂಗ್ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಅಂಗಡಿ ಮೇಲೆ ಏ. 2ರಂದು ದಾಳಿ ನಡೆಸಿದಾಗ ಕೆಲಸಗಾರರಾದ ಮುಬಾರಕ್ ಮತ್ತು ಮುಜಾಮಿಲ್ ಪಾಷ ಸಿಕ್ಕಿಬಿದ್ದರು. ಪ್ರಮುಖ ಆರೋಪಿ ಖಾಲಿದ್ ಸೇರಿ ಹಲವರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಚಿಕ್ಕ ಸಿಲಿಂಡರ್‌ಗಳಿಗೆ ಗ್ಯಾಸ್ ತುಂಬಲಾಗುತ್ತಿತ್ತು. ಅಕಸ್ಮಾತ್ ಗ್ಯಾಸ್ ಸೋರಿಕೆಯಾದರೆ ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಸಿಲಿಂಡರ್‌ ಜೊತೆಯಲ್ಲಿ 4 ತೂಕದ ಯಂತ್ರ  ಹಾಗೂ 3 ಪೈಪ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು