ಹೂಡಿಕೆಗೆ ‘ಓಪನ್ ಹೌಸ್’
ನಗರ ಪಾಲಿಕೆಗಳು, ಹಣಕಾಸು ಒದಗಿಸುವ ಸಂಸ್ಥೆಗಳು, ಸಿಎಸ್‌ಆರ್ ಪಾಲುದಾರರು, ಪರೋಪಕಾರಿ ವ್ಯಕ್ತಿಗಳು/ಸಂಸ್ಥೆಗಳು ಹಾಗೂ ನಾಗರಿಕರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ಜಿಬಿಎ ‘ನಾಗರಿಕರಿಗೆ ಮುಕ್ತ ಅವಕಾಶ’ (ಓಪನ್ ಹೌಸ್) ಕಾರ್ಯಕ್ರಮ ಆಯೋಜಿಸಿದೆ. ಈ ಮೂಲಕ ಹೂಡಿಕೆಗೆ ಸಿದ್ಧವಾಗಿರುವ ಸಾರ್ವಜನಿಕ ಸ್ಥಳಗಳ ಯೋಜನೆಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ವರ್ಷದ ಅನುದಾನದಲ್ಲಿ ನಗರ ಪಾಲಿಕೆಗಳು ಹೆಚ್ಚಿನ ಪರಿಣಾಮ ಬೀರುವ ಆಯ್ದ ಯೋಜನೆಗಳನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದರ ಜೊತೆಗೆ, ಅವು
ಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಹಭಾಗಿತ್ವಕ್ಕೆ ಅವಕಾಶ ನೀಡಲಿದೆ. ಓಪನ್ ಹೌಸ್ ಕಾರ್ಯಕ್ರಮ, ಪುರಭವನದಲ್ಲಿ ಫೆಬ್ರುವರಿ 6 ಮತ್ತು 7ರಂದು ನಡೆಯಲಿದೆ.