ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಅಕ್ರಮ ದತ್ತು ಪ್ರಕರಣ: ಬಂಧನದ ನಂತರ ರೀಲ್ಸ್ ಸ್ಟಾರ್ ಸೋನುಗೌಡ ಹೇಳಿದ್ದೇನು?

ಅಕ್ರಮ ದತ್ತು ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಹಾಗೂ ಕಿರು ತೆರೆ ನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ (29) ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Published 23 ಮಾರ್ಚ್ 2024, 6:42 IST
Last Updated 23 ಮಾರ್ಚ್ 2024, 6:42 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಕಿ ಒಬ್ಬರನ್ನು ಅಕ್ರಮವಾಗಿ ದತ್ತು ಪಡೆದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಟ್ಟ ಆರೋಪದಡಿ ರೀಲ್ಸ್ ಸ್ಟಾರ್ ಹಾಗೂ ಕಿರು ತೆರೆ ನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ (29) ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಾಲಕಿಯ ಅಕ್ರಮ ದತ್ತು ಸಂಬಂಧ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ (ಬೆಂಗಳೂರು ಪಶ್ಚಿಮ) ಕಾನೂನು ಪರಿವೀಕ್ಷಣಾ ಅಧಿಕಾರಿ ಗೀತಾ ದೂರು ನೀಡಿದ್ದಾರೆ. ಬಾಲನ್ಯಾಯ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ ಅಡಿ ಎಫ್‌ಐಆರ್ ದಾಖಲಿಸಿ ಕೊಂಡು, ಸೋನು ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮಾರ್ಚ್ 25ರವರೆಗೆ ಕಸ್ಟಡಿಗೆ ಪಡೆಯ ಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್‌. ಗಿರೀಶ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸೋನು ಗೌಡ, ‘ಎಲ್ಲವೂ ಕಾನೂನು ಪ್ರಕಾರ ತನಿಖೆ ನಡೆಯುತ್ತಿದೆ. ಯಾವುದೇ ಸಮಸ್ಯೆ ಇಲ್ಲ’ ಎಂದು ಹೇಳಿದ್ದಾರೆ.

ನ್ಯಾಯಾಲಯದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯ ನೀಡಿದ ಅವರು, ‘ಒಂದು ಹುಡುಗಿಯನ್ನು ರಕ್ಷಣೆ ಮಾಡಲು ಕರೆದುಕೊಂಡು ಬಂದಿದ್ದೆ. ಆ ಹುಡುಗಿ ಈಗ ಸುರಕ್ಷಿತವಾಗಿ ಇದ್ದಾಳೆ’ ಎಂದು ಹೇಳಿದ್ದಾರೆ.

ಆರೋಪ ಏನು?

‘ರಾಯಚೂರು ದಂಪತಿಯ ಎಂಟು ವರ್ಷದ ಮಗಳನ್ನು ಅಕ್ರಮವಾಗಿ ದತ್ತು ಪಡೆದಿದ್ದ ಸೋನು, ತನ್ನ ಮನೆಯಲ್ಲಿ ಇರಿಸಿಕೊಂಡಿದ್ದರು. ಬಾಲಕಿ ಜೊತೆ ರೀಲ್ಸ್ ವಿಡಿಯೊ ಸಹ ಮಾಡುತ್ತಿದ್ದರು. ಕಾನೂನುಬದ್ಧವಾಗಿ ದತ್ತು ಪಡೆಯುತ್ತಿರುವುದಾಗಿ ಹೇಳಿಕೊಂಡು, ಬಾಲಕಿಯ ಜೊತೆ ವಿಡಿಯೊ ಮಾಡಿ ಯುಟ್ಯೂಬ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಅಪ್‌ಲೋಡ್ ಮಾಡಿದ್ದರು’ ಎಂಬ ಅವರ ಮೇಲೆ ಆರೋಪ ಕೇಳಿ ಬಂದಿದೆ. ಈ ಕುರಿತು ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT