ಬುಧವಾರ, ಜೂಲೈ 8, 2020
28 °C
ಕೃಷಿ ವಿವಿ-ಐಟಿಸಿ ನಡುವೆ ಒಪ್ಪಂದ

ತ್ಯಾಜ್ಯಮುಕ್ತ ಕ್ಯಾಂಪಸ್‍ನತ್ತ ಜಿಕೆವಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಐಟಿಸಿ ನಡುವೆ ಒಪ್ಪಂದವಾಗಿದ್ದು, ಶೀಘ್ರವೇ ಗಾಂಧಿ ಕೃಷಿ ವಿಜ್ಞಾನ ಕೇಂದ್ರವು (ಜಿಕೆವಿಕೆ) ತ್ಯಾಜ್ಯಮುಕ್ತ ಕ್ಯಾಂಪಸ್ ಆಗಲಿದೆ.

ವಿಶ್ವವಿದ್ಯಾನಿಲಯದ ವಿವಿಧ ಕಚೇರಿಗಳು ಹಾಗೂ ವಿಭಾಗಗಳಲ್ಲಿರುವ ಹಳೆಯ ಕಾಗದಗಳು, ಪುಸ್ತಕಗಳು, ದಿನ ಪತ್ರಿಕೆಗಳು, ಪ್ಲಾಸ್ಟಿಕ್, ಇ-ತ್ಯಾಜ್ಯ ಮುಂತಾದ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಗುವುದು. ತಿಂಗಳಿಗೊಮ್ಮೆ ಇದನ್ನು ಐಟಿಸಿ ಸಂಸ್ಥೆ ಕೊಂಡೊಯ್ದು, ಹೊಸ ಕಾಗದ, ಫೈಲ್‍ಗಳು ಹಾಗೂ ಇನ್ನಿತರ ಬಳಕೆಯಾಗುವ ವಸ್ತುಗಳನ್ನು ಬದಲಿಯಾಗಿ ನೀಡಲಿದೆ.

ಕೃಷಿ ವಿಶ್ವವಿದ್ಯಾನಿಲಯ ಕುಲಪತಿ ಎಸ್.ರಾಜೇಂದ್ರ ಪ್ರಸಾದ್,'ಒಂದು ಟನ್ ಹಳೆ ಕಾಗದ ಪುನರ್ಬಳಕೆಯಿಂದ ಶೇ 70ರಷ್ಟು ಕಚ್ಚಾವಸ್ತು, ಶೇ 60ರಷ್ಟು ಕಲ್ಲಿದ್ದಲು ಹಾಗೂ ಶೇ 43ರಷ್ಟು ಶಕ್ತಿ ಉಳಿತಾಯವಾಗುತ್ತದೆ. ಕಾಗದವನ್ನು 5ರಿಂದ 7 ಬಾರಿ ಮರುಬಳಕೆ ಮಾಡಬಹುದು. ಒಂದು ಟನ್ ಮರುಬಳಕೆ ಕಾಗದ 17 ಮರಗಳ ಜೀವ ಉಳಿಸುತ್ತದೆ. ಇದರಿಂದ 250 ಪೌಂಡ್ ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುತ್ತದೆ‘ ಎಂದರು. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು