ಬೆಂಗಳೂರು: ಮನೆ ಮತ್ತು ಕಚೇರಿಗಳ ಬೀಗ ಒಡೆದು ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಲಸೂರು ನಿವಾಸಿಗಳಾದ ಅಜಯ್ (24), ಅರುಣ್ (23), ಪ್ರತಾಪ್ (25), ಸಾಯಿ ಅಲಿಯಾಸ್ ಅಪ್ಪು (25) ಬಂಧಿತರು. ಇವರಿಂದ 24 ಗ್ರಾಂ ತೂಕದ ಚಿನ್ನಾಭರಣ, ₹ 4 ಲಕ್ಷ ಮೌಲ್ಯದ 11 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 30ರಂದು ಕಂಪನಿಯೊಂದರ ಬಾಗಿಲು ಮುರಿದು 20 ಲ್ಯಾಪ್‌ಟಾಪ್, ಯುಪಿಎಸ್ ಇನ್ವರ್ಟರ್ ಬ್ಯಾಟರಿಗಳು, ವಾಷ್ ರೂಂ ಟ್ಯಾಪ್‌ಗಳು ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಹಲಸೂರಿನ ಲಕ್ಷ್ಮೀಪುರ ಹರಿಶ್ಚಂದ್ರ ಸ್ಮಶಾನದ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೃತ್ಯದಲ್ಲಿ ಮತ್ತಿಬ್ಬರು ಭಾಗಿಯಾಗಿರುವುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.