ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಪ್ರವಾಸೋದ್ಯಮದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ

Published 27 ಜುಲೈ 2023, 15:24 IST
Last Updated 27 ಜುಲೈ 2023, 15:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಗುರುವಾರ ಆಯೋಜಿಸಿದ್ದ ಮಹಾರಾಷ್ಟ್ರ ಪ್ರವಾಸೋದ್ಯಮದ ಟ್ರಾವೆಲ್ ಮತ್ತು ಟ್ರೇಡ್ ಶೋಗೆ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿವಿಧ ವ್ಯಾಪಾರ ಮೇಳಗಳ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ದೇಶದ ವಿವಿಧೆಡೆ ಎಂಟು ಟ್ರೇಡ್‌ ರೋಡ್‌ ಶೋಗಳನ್ನು ಆಯೋಜಿಸಿದೆ. ಗುರುವಾರ ರಾಜಾಜಿ ನಗರದ ಫೇರ್‌ಫೀಲ್ಡ್‌ ಮ್ಯಾರಿಯೇಟ್‌ ನಡೆದ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಧಿಕಾ ರಸ್ತೋಗಿ ಉದ್ಘಾಟಿಸಿದರು.

‘ಕಳೆದ ವರ್ಷ ನಮ್ಮ ರೋಡ್‍ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ಈ ವರ್ಷವೂ ರೋಡ್ ಶೋ ಸರಣಿಯನ್ನು ಹೊಸ ಮಾರುಕಟ್ಟೆಗಳಲ್ಲಿ ಆಯೋಜಿಸಲು ನಿರ್ಧರಿಸಲಾಯಿತು. ಹೊಸ ಅವಕಾಶ ಮತ್ತು ಅನ್ವೇಷನೆಗಾಗಿ ನಡೆಯುವ ಈ ಕಾರ್ಯಕ್ರಮದ ಮೂಲಕ ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಅಂತರ–ರಾಜ್ಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದು ಉದ್ದೇಶವಾಗಿದೆ’ ಎಂದು ರಾಧಿಕಾ ರಸ್ತೋಗಿ ತಿಳಿಸಿದರು.

ಸೂರತ್, ಅಹಮದಾಬಾದ್, ಹೈದರಾಬಾದ್, ವಿಶಾಖಪಟ್ಟಣ, ನವದೆಹಲಿ ಮತ್ತು ಚೆನ್ನೈ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಪ್ರವಾಸೋದ್ಯಮ ರೋಡ್‌ಶೋ ನಡೆಯಲಿದೆ. ಸಂಶೋಧನೆ, ನೆಟ್‍ವರ್ಕಿಂಗ್‌, ಬ್ರ್ಯಾಂಡ್ ವಿಸ್ತರಣೆ, ಮಾರಾಟ ಮಾತುಕತೆಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT