ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆಗೆ ಒಳಚರಂಡಿ ನೀರು

Last Updated 26 ಜುಲೈ 2019, 20:05 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಗೋಪಾಲನ್ ಮಾಲ್‍ನ ಒಳಚರಂಡಿ ನೀರನ್ನು ನೇರವಾಗಿ ಮಳೆ ನೀರು ಕಾಲುವೆಗೆ ಹರಿಯಲು ಬಿಟ್ಟಿರುವುದನ್ನು ಪತ್ತೆ ಮಾಡಿದ ಬಿಬಿಎಂಪಿಯಜಂಟಿ ಆಯುಕ್ತ ಎಚ್.ಬಾಲಶೇಖರ್ ಅವರು ಗೋಪಾಲನ್‍ ಮಾಲ್‍ನ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.

ಮೈಸೂರು ರಸ್ತೆಯಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ಸಂಚರಿಸುವ ಸಂದರ್ಭದಲ್ಲಿ ಕೆಟ್ಟ ದುರ್ವಾಸನೆ ಬರುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಎಚ್.ಬಾಲಶೇಖರ್ ಮತ್ತು ಆರೋಗ್ಯ ಅಧಿಕಾರಿ ಡಾ.ಮನೋಜ್‍ ಹೆಗಡೆ ಮಾಲ್‍ಗೆ ಭೇಟಿ ನೀಡಿ ಹೋಟೆಲ್, ಸಿನಿಮಾ ಮಂದಿರ, ಮಾಲ್‍ನಲ್ಲಿರುವ ಎಲ್ಲಾ ಅಂಗಡಿ ಮಳಿಗೆಗಳ ಪರಿಶೀಲನೆ ನಡೆಸಿದರು.

‘ಎರಡು ದಿನಗಳಲ್ಲಿ ನೀರುಗಾಲುವೆಗೆ ಕೊಳಚೆ ನೀರು ಹೋಗುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಮಾಲ್‍ಗೆ ಬೀಗ ಹಾಕಲಾಗುವುದು’ ಎಂದು ಎಚ್ಚರಿಕೆ ಅವರು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT